ಅದ್ದೂರಿ ಅರಿಶಿನ ಶಾಸ್ತ್ರದಲ್ಲಿ ಮಿಂಚಿದ ಡಾಲಿ-ಧನ್ಯತಾ ಜೋಡಿ!

0
Spread the love

ನಟ ಧನಂಜಯ ಅವರು ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರು ವಸ್ತು ಸಂಗ್ರಹಾಲಯ ಮೈದಾನದಲ್ಲಿಂದು ಡಾಲಿ ಧನಂಜಯ ಮತ್ತು ಧನ್ಯತಾ ಆರತಕ್ಷತೆ ನಡೆಯಲಿದೆ.

Advertisement

ಇನ್ನೂ ವಿವಾಹಪೂರ್ವ ಶಾಸ್ತ್ರಗಳು ಭಾರಿ ಸಂಭ್ರಮದಿಂದ ನಡೆಯುತ್ತಿವೆ. ಧನಂಜಯ್-ಧನ್ಯತಾ ಅರಿಶಿನ ಶಾಸ್ತ್ರ ಕೂಡ ಜೋರಾಗಿ ನಡೆದಿದೆ.​ ಡಾಲಿ ಧನಂಜಯ್ ಹಾಗೂ ಧನ್ಯತಾ ಇಬ್ಬರಿಗೂ ಸಂಬಂಧಿಕರು ಹಳದಿ ಹಚ್ಚಿದ್ರು. ಧನ್ಯತಾ ಕೂಡ ಭಾವಿ ಪತಿಗೆ ಹಳದಿ ಹಚ್ಚಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಸ್ಯಾಂಡಲ್​ವುಡ್ ಮಂದಿ ಕೂಡ ಭಾಗಿಯಾಗಿದ್ರು.

ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ಧನಂಜಯ್ – ಧನ್ಯತಾ ಕಲ್ಯಾಣ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಡಾಲಿ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಾಲಿ ಹಳದಿ ಶಾಸ್ತ್ರದ ಫೋಟೋಸ್​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಾಲಿ ಧನಂಜಯ್ ಫೋಟೋಗಳನ್ನು ನೋಡಿದ ಫ್ಯಾನ್ಸ್​ ಹೊಸ ಜೋಡಿಗೆ ಶುಭಕೋರಿದ್ದಾರೆ.


Spread the love

LEAVE A REPLY

Please enter your comment!
Please enter your name here