HomeGadag Newsರಾಮರಾಜ್ಯದ ಕನಸು ನನಸಾಗಬೇಕು

ರಾಮರಾಜ್ಯದ ಕನಸು ನನಸಾಗಬೇಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮ ರಾಜ್ಯದ ಕನಸು ನನಸಾದಾಗ ಮಾತ್ರ ಶ್ರೀರಾಮ ನವಮಿಗೊಂದು ಅರ್ಥ ಬರುತ್ತದೆ. ಶ್ರೀರಾಮನ ಗುಣಗಳನ್ನು ಮತ್ತು ಅವನ ಆಡಳಿತದ ರೀತಿ-ನೀತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಶ್ರೀರಾಮ ನವಮಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ರಾಮಮಂದಿರದಲ್ಲಿ ಆಚರಿಸಲಾದ ಶ್ರೀರಾಮ ನವಮಿ ಉತ್ಸವದಲ್ಲಿ ಅವರು ಮಾತನಾಡಿದರು.

ಶ್ರೀರಾಮ ನಮಗೆಲ್ಲರಿಗೂ ಆದರ್ಶ ಪುರುಷನಾಗಿದ್ದಾನೆ. ಅವನ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಮಾತು ಕೇಳದ ಮಕ್ಕಳಿರುವ ಈ ಕಾಲದಲ್ಲಿ ತಂದೆಯ ಒಂದು ಮಾತಿಗೆ ಹದಿನಾಲ್ಕು ವರ್ಷ ಕಾಡಿಗೆ ಹೋದ ಶ್ರೀರಾಮನ ಕಥೆಯನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಿದೆ. ಶ್ರೀ ರಾಮನ ಒಂದೊಂದು ಗುಣವೂ ಒಂದೊಂದು ಆದರ್ಶವಾಗಿದ್ದು, ಇದನ್ನು ಪಾಲಿಸುವಂತೆ ನಮ್ಮ ಮಕ್ಕಳು ಮತ್ತು ಯುವಕರಿಗೆ ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಸುಮಂಗಲೆಯರು ಶ್ರೀರಾಮನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು. ಈ ಸಂದರ್ಭದಲ್ಲಿ ವಿಶ್ವನಾಥ ಗ್ರಾಮಪುರೋಹಿತ, ಮಂಜುನಾಥ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ಮುಕುಂದಭಟ್ಟ ಸೂರಭಟ್ಟನವರ, ರಾಮಣ್ಣ ನವಲಿ, ರಾಮಕೃಷ್ಣ ಸದರಜೋಷಿ, ಶೋಭಾ ಕುಲಕರ್ಣಿ, ಪದ್ಮಾ ಕುಲಕರ್ಣಿ, ವೀಣಾ ಕುಲಕರ್ಣಿ, ಪರಿಮಳಾ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಸನ್ಮತಿ ಸದರಜೋಷಿ, ಸೀಮಾ ಕೊಂಡಿ, ರಶ್ಮಿ ಕುಲಕರ್ಣಿ, ರೂಪಾ ಗ್ರಾಮಪುರೋಹಿತ, ಸಂಧ್ಯಾ ಕುಲಕರ್ಣಿ, ಪ್ರತೀಕ್ಷಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಉಮಾಬಾಯಿ ಕೊಳ್ಳಿ ಇನ್ನೂ ಮುಂತಾದವರಿದ್ದರು. ಸಂಜೀವ ಕುಲಕರ್ಣಿ ಮತ್ತು ಗುರುರಾಜ ಕುಲಕರ್ಣಿ ಶ್ರೀರಾಮನಿಗೆ ಅಭಿಷೇಕ ಸೇವೆ ನೆರವೇರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!