ಇಡೀ ಕಾಂಗ್ರೆಸ್ ಸರ್ಕಾರ ವೋಟಿಗಾಗಿ ಇಸ್ಲಾಮಿಕರಣ ಮಾಡಲಿಕ್ಕೆ ಹೊರಟಿದೆ‌: ಆರ್.ಅಶೋಕ್

0
Spread the love

ಮೈಸೂರು: ಇಡೀ ಕಾಂಗ್ರೆಸ್ ಸರ್ಕಾರ ವೋಟಿಗಾಗಿ ಇಸ್ಲಾಮಿಕರಣ ಮಾಡಲಿಕ್ಕೆ ಹೊರಟಿದೆ‌ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಇಡೀ ಸರ್ಕಾರ ವೋಟಿಗಾಗಿ ಇಸ್ಲಾಮಿಕರಣ ಮಾಡಲಿಕ್ಕೆ ಹೊರಟಿದೆ.

Advertisement

ರಂಜಾನ್ ವೇಳೆ ರಜೆ ಕೊಡಲಿಕ್ಕೆ ಹೊರಟಿದೆ. ಇಂದು ನಡೆಯುವ ಹೋರಾಟಕ್ಕೆ ನಾನು ಭಾಗವಹಿಸಲು ಬಂದಿದ್ದೇನೆ. ನಮ್ಮ ಹಿಂದು ಸಂಘಟನೆಗಳಿಗೆ ನಮ್ಮ ಬೆಂಬಲ ಇದೆ. ಇವರನ್ನ ಮಟ್ಟ ಹಾಕಲೇಬೇಕು ಇಲ್ಲ ಅಂದರೆ ದೇಶಕ್ಕೆ ಉಳಿಗಾಲ ಇಲ್ಲ ಎಂದು ಕಿಡಿಕಾರಿದ್ದಾರೆ.

ಪೋಲಿಸರನ್ನು ಕಂಡರೆ ದೊಡ್ಡ ರಾಜಕಾರಣಿಗಳು, ದೊಡ್ಡ ದೊಡ್ಡವರೇ  ಭಯಬೀಳುತ್ತಾರೆ. ಆದರೆ ಈ ಕಿಡಿಗೇಡಿಗಳು ಪೋಲಿಸರ ಮೇಲೆ ದಾಳಿ ಮಾಡಿದ್ದಾರೆ. ನಿಯಂತ್ರಣ ಮಾಡದಿದ್ದರೆ  ಪೋಲಿಸ್ ಠಾಣೆಗೆ ಬೆಂಕಿ ಹಚ್ಚುತ್ತಿದ್ದರು.  ಈ ವೇಳೆ ಪೋಲಿಸರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದಕ್ಕೆ ಪೋಲಿಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here