ವಿಜಯಸಾಕ್ಷಿ ಸುದ್ದಿ, ಗದಗ: ಪುರಾತನರು ಮರ್ತ್ಯ ಲೋಕದಲ್ಲಿ ಭಕ್ತಿಯ ಮನೆ ಕಟ್ಟಿಕೊಂಡು ಇದ್ದರು. ಆದರೆ ಅವರು ಭಕ್ತಿಯ ಮಾಡಿ ಸ್ವರ್ಗಕ್ಕೆ ಹೋದರು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿಯವರು ನುಡಿದರು.
ಗದಗ ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶರಣ ಚರಿತಾಮೃತ ಪ್ರವಚನದಲ್ಲಿ ಅವರು ಮಾತನಾಡುತ್ತಿದ್ದರು.
12ನೇ ಶತಮಾನದ ಬಸವಾದಿ ಶಿವಶರಣರು ಮರ್ತ್ಯದಲ್ಲಿ ಬಂದು ಕಲ್ಯಾಣದಲ್ಲಿ ಭಕ್ತಿಯ ಮಹಾಮನೆ ಕಟ್ಟಿದರೆ, ಮರ್ತ್ಯಲೋಕವೆಲ್ಲವೂ ಭಕ್ತಿಯ ಸಾಮ್ರಾಜ್ಯವಾಗಿತ್ತು. ಆ ಮನೆಗೆ ತೆಲೆಬಾಗಿ, ಕೈಮುಗಿದು ಹೋದವರೆಲ್ಲರೂ ನಿಜಲಿಂಗ ಪದವಿಯನ್ನು ಪಡೆದರು. ಗಮನಾಗಮದರಹಿತ ನಿಜದ ನಿಲುವಿನಲ್ಲಿ ನಿಜಮುಕ್ತಿಂ ಪಡೆದವರು ಶಿವಶರಣರು ಎಂದು ಶಿವಶರಣೆ ನೀಲಮ್ಮತಾಯಿಯವರು ಅರ್ಥಪೂರ್ಣವಾಗಿ ತಿಳಿಸಿದರು.
ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿದರು. ಹೇಮೇಂದ್ರಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಪ್ರಸಾದದ ಸೇವೆಯನ್ನು ಪ್ರಭುಗೌಡ ಕುಭೇರಗೌಡ ಚಿನ್ನಪ್ಪಗೌಡರು ಹಾಗೂ ಕುಟುಂಬದವರು ವಹಿಸಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿಯ ಸದಸ್ಯರಾದ ಕೊಟ್ರಪ್ಪಕಮತರ, ಎಂ.ಎA. ಹಿರೇಮಠ ವಕೀಲರು, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರೂಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ, ಸುಭಾಸ ಹವಳೆ, ವಿರೂಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಸುರೇಶ ನಿಲುಗಲ್ಲ, ಅಶೋಕ ತಮೃಳ್ಳಿ, ಬಸವರಾಜ ಮೊರಬದ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.
ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ಬಿ.ಕೆ. ಸುಮಿತ್ರಕ್ಕನವರು ಮಾತನಾಡುತ್ತಾ, ರಕ್ಷಾಬಂಧನವನ್ನು ನೂರಾರು ವರ್ಷಗಳಿಂದ ಆಚರಿಸುತ್ತಾ ಬಂದಿದ್ದು, ಪ್ರತಿಯೊಬ್ಬ ಸಹೋದರಿಗೆ ಸಹೋದರನ ಬೆಂಬಲ, ರಕ್ಷಣೆ ಬೇಕೇ ಬೇಕು. ಹಿಂದೆ ಮಹಾಭಾರತದಲ್ಲಿ ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಶ್ರೀಕೃಷ್ಣನ ಬೆರಳಿಗೆ ಕಟ್ಟಿದ್ದಳು. ಮುಂದೊಂದು ದಿನ ದ್ರೌಪತಿಗೆ ಸಂಕಷ್ಟ ಬಂದಾಗ ಕೃಷ್ಣನ ಆಶಿರ್ವಾದದಿಂದ ಯಾವುದೇ ತೊಂದರೆ ದ್ರೌಪದಿಗೆ ಆಗಿಲ್ಲ ಎಂದರು.