ವಿಜಯಸಾಕ್ಷಿ ಸುದ್ದಿ, ಡಂಬಳ: ಪೂರ್ವಜನ್ಮದ ಪುಣ್ಯದ ಫಲವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ದೇಶದ ವಿವಿಧೆಡೆ ಕೆಲ ಕಠಿಣ ಸಂದರ್ಭಗಳಲ್ಲೂ ಸೇವೆ ಸಲ್ಲಿಸಿರುವ ಅನುಭವವನ್ನು ಮರೆಯಲಾಗದು. ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಬಂದ ನನಗೆ ಗೌರವಿಸಿರುವುದು ದೇಶವನ್ನು ಕಾಯುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೆ ಸ್ಪೂರ್ತಿಯಾಗಿದೆ ಎಂದು ನಿವೃತ್ತ ಸೈನಿಕ ರಾಮಣ್ಣ ಉಡಚಪ್ಪ ಹೊಸೂರ ಹೇಳಿದರು.
ಡಂಬಳ ಹೋಬಳಿಯ ಕದಾಂಪು ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಭಾರತೀಯ ಸೇವೆಯಲ್ಲಿ 24 ವರ್ಷಗಳ ದೇಶ ಸೇವೈಗೆದ ವೀರ ದಳಪತಿ, ಸಾರ್ಥಕ ಸೇವಾ ಸೇನಾ ರತ್ನ ರಾಮಣ್ಣ ಉಡಚಪ್ಪ ಹೊಸೂರರ ಅಭಿನಂದನಾ ಸಮಾರಂಭ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಖಂಡ ರಾಮಣ್ಣಗೌಡ್ರ ಹಿರೇಗೌಡ್ರ, ಬಸವಂತಪ್ಪ ಬಡಿಗೇರ ಮಾತನಾಡಿ, ರಾಮಣ್ಣ ಹೊಸೂರ ಅವರು 6ನೇ ತರಗತಿಯಲ್ಲಿಯೇ ಬಾವಿಯಲ್ಲಿ ಬಿದ್ದ ವಿದ್ಯಾರ್ಥಿಯನ್ನು ಕಾಪಾಡಿ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದರು. ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರ ಕಾರ್ಯ ಶ್ರೇಷ್ಠವಾದದ್ದು ಎಂದರು.
ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಮುಂಡರಗಿ ಮಾತನಾಡಿ, ಕದಾಂಪುರ ಗ್ರಾಮಸ್ಥರು ಸೈನಿಕರನ್ನು ಅಭೂತಪೂರ್ವವಾಗಿ ಬರಮಾಡಿಕೊಂಡು ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದರು.
ಯುವ ಮುಖಂಡ ಪ್ರವೀಣ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ರೈತರನ್ನು, 20ಕ್ಕೂ ಹೆಚ್ಚು ಮಾಜಿ ಸೈನಿಕರನ್ನು, ಪ್ರಾಥಮಿಕ, ಪ್ರೌಢಶಾಲಾ ಗುರುವೃಂದವನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಉಡಚನಗೌಡ ಪಾಟೀಲ, ವೆಂಕನಗೌಡ ಪಾಟೀಲ, ಚೆನ್ನವಿರಯ್ಯ ಸಾಲಿಮಠ, ದ್ಯಾಮಣ್ಣ ಹುಲ್ಲಣ್ಣವರ, ರೇವಣಸಿದ್ದಪ್ಪ ಸಂಕಣ್ಣವರ, ಸೇಕರಯ್ಯ ಹಿರೇಮಠ, ನಿಂಗಪ್ಪ ಗುರುವಿನ, ಲಕ್ಷ್ಮಣ ಕಟಿಗ್ಗಾರ, ಶಾಂತಯ್ಯ ಮುತ್ತಿನಪೆಂಮಠ, ವಿಶ್ವನಾಥ ಸಾಲಿಮಠ, ಬಸುರಾಜ ನರೇಗಲ್ಲ, ಶೇಖಪ್ಪ ಹುಲ್ಲಣ್ಣವರ, ರುದ್ರಪ್ಪ ಅಡ್ರಗಟ್ಟಿ, ಪ್ರಭು ಕಾರಪುಡಿ, ಎ.ಎಲ್. ಬಿಜಾಪುರ, ಎಸ್.ಎಸ್. ಆದಪ್ಪನವರ, ಗುರುರಾಜ ಗೌರಿ, ಪ್ರದೀಪ ನಾಯಕ ಇದ್ದರು.
ವೇ.ಮೂ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ದೇಶದ ಆತ್ಮವಿಶ್ವಸ ಎಂದರೆ ರೈತರು, ಸೈನಿಕರು, ಗುರುವೃಂದ. ಅವರ ಮೌಲ್ಯಯುತ ಕೊಡುಗೆ ಸದಾಕಾಲ ಇರುತ್ತವೆ. ಆ ಹಿನ್ನೆಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ರಾಮಣ್ಣ ಅವರ ಕಾರ್ಯ ಅಮೋಘವಾದದ್ದು ಎಂದರು.