ಬೆಂಗಳೂರು: ತಂದೆಯಿಂದಲೇ ಮಗನ ಕೊಲೆಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ತೇಜಸ್ (14)ಮೃತ ಮಗನಾಗಿದ್ದು, 20 ದಿನಗಳಿಂದ ತೇಜಸ್ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋಗದೇ ಪುಂಡ ಹುಡುಗರ ಜೊತೆ ತಿರುಗಾಡುತ್ತಿದ್ದ ತೇಜಸ್ ರಾತ್ರಿ ಮನೆಗೆ ಬಂದು ಮೊಬೈಲ್‌ನಲ್ಲಿ ರೀಲ್ಸ್, ವೀಡಿಯೋ ಗೇಮ್ ಆಡುತ್ತಿದ್ದ.
Advertisement
ಅಲ್ಲದೇ ಹೊಸ ಮೊಬೈಲ್ ಕೊಡಿಸುವಂತೆ ತಂದೆಯೊಂದಿಗೆ ಜಗಳವಾಡಿದ್ದ. ಕುಡಿದು ಮನೆಗೆ ಬಂದಿದ್ದ ತಂದೆ ರವಿಕುಮಾರ್ ಮಗ ಮೊಬೈಲ್ ನೋಡುತ್ತಿರುವುದನ್ನು ಕಂಡು ಕೋಪಗೊಂಡು ಕ್ರಿಕೆಟ್ ಬ್ಯಾಟ್‌ನಿಂದ ಆತನ ತಲೆಗೆ ಹಲ್ಲೆ ನಡೆಸಿದ್ದಾನೆ.
ಪರಿಣಾಮ ಗಂಭೀರ ಗಾಯಗೊಂಡ ತೇಜಸ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಂದೆ ರವಿಕುಮಾರ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.