ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಹಲವರು ಜೀವ ಕಳೆದುಕೊಂಡಿದ್ದಾರೆ. ಇದು ಪ್ರತಿಯೊಬ್ಬರಿಗೂ ನೋವು ತರಿಸಿದ್ದು ಘಟನೆಯ ಕುರಿತು ಸ್ಯಾಂಡಲ್ ವುಡ್ ಕಲಾವರಿದರು ಬೇಸರ ಹೊರ ಹಾಕಿದ್ದಾರೆ. ಘಟನೆಯ ಕುರಿತು ನಟ ಯುವರಾಜ್ ಕುಮಾರ್ ಕೂಡ ಬೇಸರ ಹೊರ ಹಾಕಿದ್ದು, ಯುವ ರಾಜ್‌ಕುಮಾರ್ ನಟನೆಯ ಎಕ್ಕ ಚಿತ್ರದ ಟೀಸರ್ ರಿಲೀಸ್ ಮುಂದೂಡಲಾಗಿದೆ.
ಇಂದು ಬೆಳಗ್ಗೆ ಎಕ್ಕ ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಘಟನೆಯ ಕುರಿತು ಬೇಸರ ಹೊರ ಹಾಕಿರುವ ಚಿತ್ರತಂಡ ಚಿತ್ರದ ಟೀಸರ್ ರಿಲೀಸ್ ಅನ್ನ ಮುಂದೂಡಿದ್ದಾರೆ.
ಇಂದು ನಟ ಯುವರಾಜ್‌ಕುಮಾರ್ ಜನ್ಮ ದಿನ. ಹೀಗಾಗಿ ಎಕ್ಕ ಚಿತ್ರತಂಡ ಇಂದು ಚಿತ್ರದ ಟೀಸರ್ ರಿಲೀಸ್ ಮಾಡಲು ಮುಂದಾಗಿತ್ತು. ಆದರೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಟೀಸರ್ ರಿಲೀಸ್ ಅನ್ನು ಮುಂದೂಡಲಾಗಿದೆ. ಎಕ್ಕ ಟೀಸರ್ ರಿಲೀಸ್ ಮಾಡ್ತೀವಿ ಅಂತಲೇ ಸಿನಿಮಾ ತಂಡ ಮೊನ್ನೇನೆ ಹೇಳಿಕೊಂಡಿತ್ತು. ಆ ಪ್ರಕಾರ ಏಪ್ರಿಲ್-23 ರಂದು ಬೆಳಗ್ಗೆ ಟೀಸರ್ ರಿಲೀಸ್ ಪ್ಲಾನ್ ಇತ್ತು. ಆದರೆ, ಪಹಲ್ಗಾಮ್ ಟೆರರ್ ಅಟ್ಯಾಕ್‌ನಿಂದ ಸಿನಿಮಾ ತಂಡ ಡಿಸ್ಟರ್ಬ್ ಆಗಿದೆ. ಟೀಸರ್ ರಿಲೀಸ್ ಬೆಳಗ್ಗೆಯಿಂದ ಸಂಜೆ ಹೊತ್ತಿಗೆ ರಿಲೀಸ್ ಮಾಡ್ತೀವಿ ಅಂತಲೇ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.
ಇನ್ನೂ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಕಾರಣದಿಂದ ಇಂದು ತಮ್ಮ ಹುಟ್ಟುಹಬ್ಬವನ್ನು ಯುವ ಆಚರಿಸಿಕೊಂಡಿಲ್ಲ. ಆದರೆ ದೂರದ ಊರಿನಿಂದ ಬಂದ ಅಭಿಮಾನಿಗಳನ್ನು ಭೇಟಿ ಆಗಿ, ಅವರ ಆಸೆಯಂತೆ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಉಗ್ರರ ದಾಳಿ ಬಗ್ಗೆ ಮಾತನಾಡಿರುವ ಯುವ, ಇದೊಂದು ಹೇಯ ಕೃತ್ಯ ಎಂದಿದ್ದಾರೆ.