ಮಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ನಟನೆಯ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಸಿನಿಮಾಕ್ಕೆ ರಿಲೀಸ್ಗೂ ಮೊದಲೇ ಸಂಕಷ್ಟ ಎದುರಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ ತಂದಿದ್ದು ಸಿನಿಮಾದ ಟೈಟಲ್ ಬದಲಿಸುವಂತೆ ಸೂಚಿಸುತ್ತಿದೆ.
ರಾಮಾಯಣದಲ್ಲಿ ಶ್ರೀರಾಮನ ಪತ್ನಿ ಸೀತೆಯ ಇನ್ನೊಂದು ಹೆಸರು ಜಾನಕಿ ಎಂದು. ಇದೇ ಕಾರಣಕ್ಕೆ ಚಿತ್ರದ ಟೈಟಲ್ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಆದ್ರೆ ಇದಕ್ಕೆ ಚಿತ್ರತಂಡ ಸುತರಾಂ ಸಿದ್ದವಿಲ್ಲ. ಹೀಗಾಗಿ ಇದೇ ಜೂನ್ 27ರಂದು ಸಿನಿಮಾ ರಿಲೀಸ್ ಆಗಬೇಕಿದೆ. ಆದರೆ ಇನ್ನೂ ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣಕ್ಕೆ ನಿಗದಿತ ದಿನಾಂಕದಂದು ಸಿನಿಮಾ ರಿಲೀಸ್ ಆಗುತ್ತಾ ಎಂಬ ಕುತೂಹಲ ಶುರುವಾಗಿದೆ.
‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಸಿನಿಮಾವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಾಗೂ ಕಾನೂನು ಹೋರಾಟ ನಡೆಸುವ ಮಹಿಳೆಯ ಕಥೆಯನ್ನು ಒಳಗೊಂಡಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುರೇಶ್ ಗೋಪಿ ನಟಿಸಿದ್ರೆ, ಹಲ್ಲೆಗೊಳಗಾದ ಮಹಿಳೆಯ ಪಾತ್ರದಲ್ಲಿ ನಟಿ ಅನುಪಮಾ ಪರಮೇಶ್ವರನ್ ಕಾಣಿಸಿಕೊಂಡಿದ್ದಾರೆ.
ಕೇರಳ ಸಿನಿಮಾ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಕ್ಲಿನ್ ಚಿಟ್ ಕೊಟ್ಟಿತ್ತು. ಆದರೆ, ಮುಂಬೈನಲ್ಲಿರೋ ಸೆನ್ಸಾರ್ ಮಂಡಳಿಯವರು ಈ ಟೈಟಲ್ಗೆ ತಕರಾರರು ಎತ್ತಿದ್ದು ಟೈಟಲ್ ಬದಲಾಯಿಸುವಂತೆ ಸೂಚಿಸಿದೆ.