ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ನಿತ್ಯ ಹೊಸ ಹೊಸ ಪ್ರತಿಭೆಗಳು ಎಂಟ್ರಿಕೊಡ್ತಾನೆ ಇರ್ತಾರೆ. ಜೊತೆಗೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ಇದೀಗ ಎಲ್ಲೆಡೆ ಸದ್ದು ಮಾಡುತ್ತಿರುವ ಎಐ ಟೆಕ್ನಾಲಜಿ ಬಳಕಿ ಕೇವಲ 10 ಲಕ್ಷದಲ್ಲಿ ಸಿನಿಮಾವೊಂದು ತಯಾರಾಗಿದೆ.
ಎಸ್.ನರಸಿಂಹಮೂರ್ತಿ ಎಂಬುವವರು AI ಟೆಕ್ನಾಲಜಿ ಬಳಕೆ ಮಾಡಿ ಕೇವಲ 10 ಲಕ್ಷ ವೆಚ್ಚದಲ್ಲಿ 95 ನಿಮಿಷದ ಇಡೀ ಒಂದು ಚಿತ್ರವನ್ನ ಮಾಡಿದ್ದಾರೆ. ಈ ಚಿತ್ರದಲ್ಲಿ ಎಲ್ಲವೂ AI ಮಯವೇ ಆಗಿದೆ. ಹೀರೋ…ಹೀರೋಯಿನ್, ಸಂಗೀತ, ಹಿನ್ನೆಲೆ ಸಂಗೀತ, ಡಬ್ಬಿಂಗ್ ಹೀಗೆ ಎಲ್ಲವನ್ನೂ AI ಸಹಾಯದಿಂದಲೇ ಮಾಡಲಾಗಿದೆ. ಈ ಚಿತ್ರಕ್ಕಾಗಿ ಎಸ್.ನರಸಿಂಹಮೂರ್ತಿ ಹಾಗೂ AI ತಂತ್ರಜ್ಞ ನೂತನ್ ಕೆಲಸ ಮಾಡಿದ್ದಾರೆ.
ಚಿತ್ರಕ್ಕೆ ಲವ್ ಯುವ ಎಂದು ಟೈಟಲ್ ಇಡಲಾಗಿದ್ದು ಇದು ಕನ್ನಡದ ಮೊಟ್ಟ ಮೊದಲ AI ಸಿನಿಮಾವಾಗಿದೆ. ಇದರಲ್ಲಿರೋ ಹೀರೋ ಮತ್ತು ಹೀರೋಯಿನ್ ಇಬ್ಬರು AI ಟೆಕ್ನಾಲಜಿಯಿಂದಲೇ ಜನರೇಟ್ ಆಗಿದ್ದಾರೆ. ಈಗಾಗಲೇ ಒಂದೆರಡು ಚಿತ್ರಗಳನ್ನು ನಿರ್ದೇಶನ ಮಾಡಿರುವ ಎಸ್ ನರಸಿಂಗ ಮೂರ್ತಿ ಇದೀಗ ಎಐ ಬಳಸಿ ಹೊಸ ಪ್ರಯೋಗ ಮಾಡಿದ್ದಾರೆ. ಈ ಚಿತ್ರಕ್ಕೆ ಕೇವಲ ಇಬ್ಬರು ಮಾತ್ರ ಕೆಲಸ ಮಾಡಿದ್ದಾರೆ.
ಲವ್ ಯು ಚಿತ್ರದ ಅವಧಿ ಕೇವಲ 95 ನಿಮಿಷ ಇದೆ. ಇಷ್ಟು ಸಮಯದಲ್ಲಿಯೇ 12 ಹಾಡುಗಳನ್ನ ಬಳಸಲಾಗಿದೆ. ಈ ಚಿತ್ರಕ್ಕೆ 6 ತಿಂಗಳವರೆಗೂ ಕೆಲಸ ಮಾಡಲಾಗಿದೆ. ಲವ್ ಯು ಚಿತ್ರಕ್ಕೆ ಸೆನ್ಸಾರ್ ಆಗಿದ್ದು U/A ಪ್ರಮಾಣ ಪತ್ರವನ್ನ ನೀಡಲಾಗಿದೆ. ಲವ್ ಯು ಸಿನಿಮಾವನ್ನು ಇದೇ ವರ್ಷ ಮೇ ತಿಂಗಳಲ್ಲಿ ರಿಲೀಸ್ ಮಾಡೋಕೆ ನಿರ್ದೇಶಕರು ಮುಂದಾಗಿದ್ದಾರೆ.