ಗದಗ:- ನೂಕು ನುಗ್ಗಲಿನಲ್ಲಿ ಬಸ್ ಹತ್ತಲು ಹೋಗಿ ಬಾಲಕಿ ಅಸ್ವಸ್ಥಗೊಂಡ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಜರುಗಿದೆ.
ಬೆಂಗಳೂರಿಂದ ಲಕ್ಷ್ಮೇಶ್ವರ ಮೂಲಕ ಗದಗ ತಲುಪುವ ಬಸ್ ಇದಾಗಿದ್ದು, ಎಲ್ಲಾ ಬಸ್ ಗಳು ರಶ್ ಆಗಿದ್ದರಿಂದ ಪ್ರಯಾಣಿಕರು ಬಸ್ ಹತ್ತಲು ಹೋಗಿ ಪರದಾಟ ನಡೆಸಿದ್ದಾರೆ. ಗದಗ ಹೋಗಲು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಜಮಾವಣೆಗೊಂಡಿದ್ದರು.
ಈ ವೇಳೆ ಜನರ ಮಧ್ಯ ತೂರಿಕೊಂಡು ಬಸ್ ಏರಲು ಬಾಲಕಿ ಮುಂದಾಗಿದ್ದರು. ನೂಕು ನುಗ್ಗಲಿಗೆ ಸಿಕ್ಕು ಬಾಲಕಿ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಅಸ್ವಸ್ಥ ಬಾಲಕಿಯನ್ನ ಬಸ್ ನಿಲ್ದಾಣದಲ್ಲಿ ಕೂರಿಸಿ ಸಹ ಪ್ರಯಾಣಿಕರು ಆರೈಕೆ ಮಾಡಿದರು. ಕೆಲ ಹೊತ್ತು ಕೂತು ವಿಶ್ರಾಂತಿ ಬಳಿಕ ಬಸ್ ಗೆ ಬಾಲಕಿ ಹತ್ತಿ ತೆರಳಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿ ಆದಾಗಿನಿಂದ ಒಂದಿಲ್ಲೊಂದು ಇದೇ ತರಹದ ಸಮಸ್ಯೆಯನ್ನು ಪ್ರಯಾಣಿಕರು ಅನುಭವಿಸುವಂತಾಗಿದೆ.



