ವಿಜೃಂಭಣೆಯ ಗಂಧ-ಉರುಸ್ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದಲ್ಲಿ ಶನಿವಾರ ಹಜರತ್ ಮೆಹಬೂಬ್ ಸುಭಾನಿ ದರ್ಗಾದ ಗಂಧ ಮತ್ತು ಉರುಸು ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

Advertisement

ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಗಂಧವನ್ನು ಡೊಳ್ಳು ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಂಡಿವಡ್ಡರ ಓಣಿಯಲ್ಲಿರುವ ದರ್ಗಾಕ್ಕೆ ತರಲಾಯಿತು.

ದರ್ಗಾದಲ್ಲಿರುವ ಸಮಾಧಿಗೆ ವಿದ್ಯುತ್ ದೀಪಗಳ ಅಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ನೆರೆದಿದ್ದ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನೆರವೇರಿತು.

ಈ ವೇಳೆ ತಾ.ಪಂ ಮಾಜಿ ಸದಸ್ಯ ಸಂದೇಶ್ ದೊಡ್ಡಮೇಟಿ, ಗ್ರಾ.ಪಂ ಮಾಜಿ ಸದಸ್ಯ ಹರ್ಷವರ್ಧನ್ ದೊಡ್ಡಮೇಟಿ, ಜಮಾತ್ ಕಮಿಟಿಯ ಅಧ್ಯಕ್ಷ ಹುಚ್ಚುಸಾಬ ಬಸಾಪೂರು, ಯಮನೂರಸಾಬ ನದಾಫ್, ಕಾಶೀಮಲ್ಲಿ ಗಡಾದ, ಬಾಬುಸಾಬ ರಾಜೂರ, ಹಸನ್‌ಸಾಬ ಗಡಾದ, ರೈಮನಸಾಬ ಬಾಲೇಸಾಬನವರ, ಮಾಬು ನದಾಫ್, ಬಂಧು ಗಡಾದ, ದಾದಾಸಾಹೇಬ್ ನಮಾಜಿ, ಕುತ್ಬುದೀನ್ ಗಡಾದ, ಎಂ.ಎಚ್. ನದಾಫ್, ಹುಸೇನಸಾಬ ಓಲೆಕಾರ ಸೇರಿದಂತೆ ಇನ್ನಿತರರು ಇದ್ದರು.


Spread the love

LEAVE A REPLY

Please enter your comment!
Please enter your name here