ವಿಜಯಸಾಕ್ಷಿ ಸುದ್ದಿ, ಗದಗ: ಬೇಂದ್ರೆಯವರ ಕಾವ್ಯ ಭಾಷೆ ವಿಶಿಷ್ಠವಾದುದು. ಜನಭಾಷೆ ಹಾಗೂ ಪ್ರಕೃತಿ ಭಾಷೆಯನ್ನು ಸೇರಿಸಿ ಧ್ವನಿಪೂರ್ಣ ಕವಿತೆಗಳನ್ನು ರಚಿಸಿದ್ದಾರೆ. ಓದುಗ ಹಾಗೂ ವಿಮರ್ಶಕನ ಸಾಮರ್ಥ್ಯಕ್ಕನುಗುಣವಾಗಿ ಅರ್ಥ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಕವಿತಾ ಸಂಕಲನದ ಅನೇಕ ಕವಿತೆಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹೂರಣವನ್ನು ಕಾಣಬಹುದಾಗಿದೆ ಎಂದು ಡಾ. ಸಂಗಮೇಶ ತಮ್ಮನಗೌಡ್ರ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗದುಗಿನ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ನಾರಾಯಣಭಟ್ ಶಿವಪೂರ ಹಾಗೂ ಕು.ಶಿ. ಹರಿದಾಸಭಟ್ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಂದ್ರೆಯವರ ಕಾವ್ಯವನ್ನು ಪ್ರಕೃತಿ, ಪ್ರೀತಿ, ತಾಯಿ, ಮಾನವೀಯತೆ, ವಿರಾಟದರ್ಶನ, ಅಧ್ಯಾತ್ಮ, ಅನುಭಾವ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ. ಹೃದಯ ಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ ಈ ಸಂಕಲನಗಳು ‘ಅರಳು-ಮರಳು’ ಎಂಬ ಹೆಸರಿನಲ್ಲಿ ಒಟ್ಟಾಗಿ ಸೇರಿ ಪ್ರಕಟವಾಗಿವೆ. ಈ ಕವಿತೆಗಳಲ್ಲಿ ಬೇಂದ್ರೆಯವರ ಆಧ್ಯಾತ್ಮಿಕತೆ, ಅನುಭಾವ, ಗುರುಭಕ್ತಿಯ ಸ್ವರೂಪದ ನೆಲೆಗಳು ವ್ಯಕ್ತವಾಗಿವೆ. ಮಾನವನ ಉನ್ನತಿಗೆ ಅವಶ್ಯವಾದ ಆಧ್ಯಾತ್ಮಿಕ ವಿಚಾರಗಳಿವೆ ಎಂದು ತಿಳಿಸಿದರು.
ನಾರಾಯಣಭಟ್ ಶಿವಪೂರ ಅವರ ಶ್ರಮ ಸಂಸ್ಕೃತಿ ಹಾಗೂ ಕು.ಶಿ. ಹರಿದಾಸಭಟ್ ಅವರ ಸಾಹಿತ್ಯದೊಲುಮೆಯನ್ನು ಡಾ. ದತ್ತಪ್ರಸನ್ನ ಪಾಟೀಲ ವಿವರಿಸಿದರು.
ಕಾರ್ಯಕ್ರಮದಲ್ಲಿ ಅನಂತ ಮೋಹನ ಭಟ್, ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ ಮಾತನಾಡಿದರು. ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಪ್ರಶಸ್ತಿಗೆ ಭಾಜನರಾದ ಕಲಾವಿದ ಅಶೋಕ ಸುತಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಜಯದೇವಭಟ್, ಕೃಷ್ಣಮೂರ್ತಿ ಶಿವಪೂರ ಉಪಸ್ಥಿತರಿದ್ದರು.
ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು
ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಚಂದ್ರಶೇಖರ ವಸ್ತçದ, ಎಂ.ಸಿ. ವಗ್ಗಿ, ಆರ್.ಡಿ. ಕಪ್ಪಲಿ, ಬಿ.ಬಿ. ಹೊಳಗುಂದಿ, ಬಸವರಾಜ ಗಣಪ್ಪನವರ, ಡಾ. ಶಿವಪ್ಪ ಕುರಿ, ಎಂ.ವಿ. ಕೆಂಭಾವಿಮಠ, ಶೋಭಾ ಶಿವಪೂರ, ಬಿ.ಎಸ್. ಹಿಂಡಿ, ಯಲ್ಲಪ್ಪ ಹಂದ್ರಾಳ, ಎಸ್.ಎಸ್. ಕಳಸಾಪೂರ, ಪ್ರ.ತೋ. ನಾರಾಯಣಪೂರ, ಮಂಜುಳಾ ವೆಂಕಟೇಶಯ್ಯ, ಭಾರತಿ ಮೋಹನ ಕೋಟಿ, ಜಯಶ್ರೀ ಅಂಗಡಿ, ನಿಖಿತಾ ಸುತಾರ, ಜಯನಗೌಡ ಪಾಟೀಲ, ಸತೀಶ ಚನ್ನಪ್ಪಗೌಡರ, ಬಸವರಾಜ ವಾರಿ, ಸಿ.ಟಿ. ದುಂದೂರ, ರಾಜೇಂದ್ರ ಬರದ್ವಾಡ, ರಾಚಪ್ಪ ಕುಪ್ಪಸದ, ಕಾರ್ತಿಕ ಶಿವಪೂರ, ಪರಮೇಶ್ವರಪ್ಪ ಐರಣಿ, ಬೃಂದಾ ಶಿವಪೂರ, ಗುರುದೇವಿ ಪಾರ್ವತಿಮಠ, ಉಮಾ ಪಾರ್ವತಿಮಠ, ಅಶೋಕ ಕೊಡಗಲಿ, ಎಚ್.ಟಿ. ಸಂಜೀವಸ್ವಾಮಿ, ಸಿ.ಎಂ. ಮಾರನಬಸರಿ, ಹೇಮಲತಾ ಪಾಟೀಲ, ಸುಮನ ಪಾಟೀಲ, ಡಿ.ಜಿ. ಕುಲಕರ್ಣಿ, ಶಾಂತಾ ಗಣಪ್ಪನವರ, ಶೈಲಶ್ರೀ ಕಪ್ಪರದ, ಅಂಬಿಕಾ ಶಿವಪೂರ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಭಾರತೀಯ ಆಧ್ಯಾತ್ಮಿಕ ಚಿಂತನೆಗಳು ಮಾನವನ ಔನ್ನತ್ಯಕ್ಕೆ ದಾರಿದೀವಿಗೆಯಾಗಿವೆ. ಬೇಂದ್ರೆಯವರು ಅರವಿಂದರ, ಬ್ರಹ್ಮಚೈತನ್ಯರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅವರ ಬಹುಪಾಲು ಕವಿತೆಗಳು ಆಧ್ಯಾತ್ಮಿಕತೆಯ ಲೇಪವನ್ನು ಹೊಂದಿವೆ ಎಂದು ತಿಳಿಸಿದರು.