ಸರ್ಕಾರಕ್ಕೆ ಜನರ ಕೂಗು ಅರ್ಥವಾಗದು: ರಾಜು ಕುರುಡಗಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರುತ್ತಿರುವ ಕಾಂಗ್ರೆಸ್ ಸರ್ಕಾರ ಬಡವರ ತೆರಿಗೆ ಹಣವನ್ನು ಲೂಟಿ ಮಾಡಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಸರ್ಕಾರಕ್ಕೆ ಜನಸಾಮಾನ್ಯರ ಕೂಗು ಅರ್ಥವಾಗದು. ಸ್ಥಳೀಯ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ರಾಜ್ಯದ ಸಚಿವ ಸಂಪುಟ ಸಭೆಯ ಪತ್ರಿಕಾಗೋಷ್ಠಿಗೆ ಮಾತ್ರ ಸಿಮಿತವಾಗಿ ಮತ ಹಾಕಿ ಗೆಲ್ಲಿಸಿದ ಗದಗ ಜನತೆಯನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದರು.

Advertisement

ನಗರದ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರಿ ಭ್ರಷ್ಟಾಚಾರದಲ್ಲಿ ಮುಳಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಗದಗ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಿಗಮ ಮಂಡಳಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಫಕ್ಕೀರೇಶ ರಟ್ಟಿಹಳ್ಳಿ, ಪ್ರಮುಖರಾದ ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಸಿದ್ದು ಪಲ್ಲೇದ, ಸುರೇಶ ಮರಳಪ್ಪನವರ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ರವಿ ದಂಡಿನ, ಸುಧಿರ ಕಾಟಿಗರ, ಅಶೋಕ ಕುಡತಿನಿ, ಶಂಕರ ಕಾಕಿ, ಸುರೇಶ ಚಿತ್ತರಗಿ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ನಿರ್ಮಲಾ ಕೊಳ್ಳಿ, ನವೀನ ಕೊಟೆಕಲ್, ವಿಜಯಲಕ್ಷಿö್ಮÃ ಮಾನ್ವಿ, ಶಿವು ಹಿರೇಮನಿಪಾಟೀಲ, ವiಹಾಂತೇಶ ನಲವಡಿ, ವಿನಾಯಕ ಮಾನ್ವಿ, ಗಂಗಾಧರ ಮೇಲಗಿರಿ, ರಾಚಯ್ಯ ಹೊಸಮಠ, ದೇವೆಂದ್ರಪ್ಪ ಹೂಗಾರ, ವಂದನಾ ವರ್ಣೇಕರ, ಪಾರ್ವತಿ ಪಟ್ಟಣಶೆಟ್ಟಿ, ಜಯಶ್ರೀ ಅಣ್ಣಿಗೇರಿ, ಅವಿನಾಶ ಹೊನಗುಡಿ, ಕಮಲಾಕ್ಷಿ ಗೊಂದಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ಟರ, ಕವಿತಾ ಬಂಗಾರಿ, ಪ್ರೀತಿ ಶಿವಪ್ಪನಮಠ, ರೇಖಾ ಗೌಳಿ, ಶೆಖವ್ವ ಮಾಸರೆಡ್ಡಿ, ವಸಂತ ಹಬೀಬ, ಪ್ರವೀಣ ಹಡಪದ, ಚಂದ್ರು ಒಂಟೆತ್ತಿನವರ, ಗೋಪಾಲ ಗಡ್ಡದವರ, ವಿನೋದ ಹಂಸನೂರ ಮುಂತಾದವರು ಪಾಲ್ಗೊಂಡಿದ್ದರು.

ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ಗದಗ ನಗರದ ಯಾವುದೇ ರಸ್ತೆಗಳ ಗುಂಡಿಗಳನ್ನು ಮುಚ್ಚಿಲ್ಲ, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಜನರ ತೆರಿಗೆ ಹಣವನ್ನು ಲೂಟಿ ಮಾಡಲೆಂದೇ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಂತಿದೆ ಎಂದರು.


Spread the love

LEAVE A REPLY

Please enter your comment!
Please enter your name here