ಬೆಂಗಳೂರು: ಸರ್ಕಾರ ಅನುದಾನ ಕೊಡ್ತಿದೆ, ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಜಾರಿ ಮಾಡೋದು ನಮ್ಮ ಕರ್ತವ್ಯ. ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳಲಿ, ತಪ್ಪಿಲ್ಲ, ನಾನೂ ಕೇಳ್ತೀನಿ. ಸರ್ಕಾರ ಅನುದಾನ ಕೊಡ್ತಿದೆ.
Advertisement
ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ. ಹಿಂದಿನ ಸರ್ಕಾರ ಸಾಕಷ್ಟು ಬಿಲ್ ಬಾಕಿ ಉಳಿಸಿಹೋಗಿದ್ರು. ಕೇಂದ್ರವೂ ಸರಿಯಾದ ಅನುದಾನ ಕೊಡ್ತಿಲ್ಲ. ಕೇಂದ್ರದ ಅನುದಾನ ತಂದು, ನಮ್ಮ ಸಪನ್ಮೂಲವೂ ಹೆಚ್ಚಿಸಿಕೊಳ್ತೇವೆ ಎಂದು ಭರವಸೆ ನೀಡಿದರು.
ಇನ್ನೂ ಇಂದಿರಾನಗರ ಕೊಲೆ ಪ್ರಕರಣದ ಕುರಿತು ಮಾಹಿತಿ ನೀಡಿದ ಸಚಿವರು, ತುಂಬಾ ಪರಿಚಯಸ್ಥನೇ ಈ ಕೊಲೆ ಮಾಡಿದ್ದಾನೆ. ಅವರಿಬ್ಬರೂ ಪ್ರೀತಿಸ್ತಿದ್ರು, ಹೊಟೇಲ್ಗೆ ಕರೆದೊಯ್ದು ಕೊಲೆ ಮಾಡಿದ್ದಾನೆ. ಆಕೆ ಕೇರಳದವರು, ಆತ ಅಸ್ಸಾಂ ಮೂಲ, ಈಥರ ಆದಾಗ ನಾವೂ ಗಮನಿಸ್ತಿರ್ತೀವಿ, ತನಿಖೆ ನಡೀತಿದೆ ಎಂದರು.