ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರ ಅನೇಕ ಇಲಾಖೆಗಳಲ್ಲಿ ಅಪರಿಮಿತ ಭ್ರಷ್ಟಾಚಾರ ನಡೆಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರುಗಳ ಮೇಲೆ ಪ್ರಕರಣಗಳಾಗಿವೆ. ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸ್ಭೆರಿದಂತೆ ಸಾರ್ವಜನಿಕ ಹಿತಾಸಕ್ತಿ ಕೆಲಸಗಳಿಗೆ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಅರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಬಾಣಂತಿಯರು ಸಾವನ್ನಪ್ಪುತ್ತಿದ್ದು, ಈ ಸಾವುಗಳಿಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗಿದೆ ಎಂದು ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಹಾಗೂ ಗದಗ ನಗರ ಮಂಡಲದ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ದುರಾಡಳಿತದಿಂದ ಅವರ ಕ್ಷೇತ್ರದಲ್ಲಿ ಅವರ ಆಪ್ತರ ಕೈವಾಡದಿಂದ ಸ್ವತಃ ಖರ್ಗೆರವರ ಗಮನಕ್ಕೆ ಇರುವುದಾಗಿ ಸಚಿನ್ ಪಂಚ್ಯಾಳ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಿಯಾಂಕ್ ಖರ್ಗೆಯವರು ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ಕೊಡಬೇಕು. ಕರ್ನಾಟಕ ಸರ್ಕಾರದ ದುರಾಡಳಿತದ ಸನ್ನಿವೇಶಗಳನ್ನು ಜನರು ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ, ಎಂ.ಎಸ್. ಕರೀಗೌಡ್ರ, ಶ್ರೀಪತಿ ಉಡುಪಿ, ಅನಿಲ ಅಬ್ಬಿಗೇರಿ, ರಮೇಶ ಸಜ್ಜಗಾರ, ಉಷಾ ದಾಸರ, ಮಂಜು ಮುಳಗುಂದ, ವಿಜಯಲಕ್ಷ ಮಾನ್ವಿ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ನಾಗರಾಜ ಕುಲಕರ್ಣಿ, ಸಿದ್ದು ಪಲ್ಲೇದ, ವಿಜಯಕುಮಾರ ಗಡ್ಡಿ, ಈಶ್ವರಪ್ಪ ರಂಗಪ್ಪನವರ, ಬಿ.ಎಸ್. ಚಿಂಚಲಿ, ಭದ್ರೇಶ ಕುಸ್ಲಾಪೂರ, ವಾಯ್.ಪಿ. ಅಡ್ನೂರ, ಭಿಮಸಿಂಗ ರಾಠೋಡ, ನಿಂಗಪ್ಪ ಹುಗ್ಗಿ, ಶಶಿಧರ ದಿಂಡೂರ, ಕೆ.ಪಿ. ಕೋಟಿಗೌಡ್ರ, ಈರ್ಷಾದ ಮಾನ್ವಿ, ರಾಘವೇಂದ್ರ ಯಳವತ್ತಿ, ಚಿನ್ನಪ್ಪ ನೆಗಳೂರ, ಮಾಂತೇಶ ನಲವಡಿ, ಪ್ರಕಾಶ ಅಂಗಡಿ, ವಿದ್ಯಾವತಿ ಗಡಗಿ, ಅಶ್ವಿನಿ ಅಂಕಲಕೋಟಿ, ಸಂತೋಷ ಅಕ್ಕಿ, ನವೀನ ಕೊಟೆಕಲ್, ಧರ್ಮರಾಜ ಕೊಂಚಿಗೇರಿ, ಶಾರದಾ ಸಜ್ಜನರ, ಮಹೇಶ ಶಿರಹಟ್ಟಿ, ಉಮಾ ಕಲ್ಲನಗೌಡ್ರ, ಕಮಲಾಕ್ಷಿ ಗೊಂದಿ, ವೀರಣ್ಣ ಉಪ್ಪಿನ, ವಂದನಾ ವರ್ಣೇಕರ, ಜಯಶ್ರೀ ಅಣ್ಣಿಗೇರಿ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ಕಮಲಾಕ್ಷಿ ತಕ್ಕಲಕೊಟಿ, ಯೋಗೇಶ್ವರಿ ಭಾವಿಕಟ್ಟಿ, ಚಂದ್ರು ತಡಸದ, ಸುಮಂಗಲಾ ಕೊನೆವಾಲ, ಸುಂದರಬಾಯಿ, ನಿರ್ಮಲಾ ಪಾಟೀಲ, ಜ್ಯೂತಿ ಹೊಂಗಲ, ಅರುಣಾ ಪಾಟಿಲ, ಮಾಂತೇಶ ಬಾತಾಖಾನಿ, ರೇಖಾ ವಿರಾಪೂರ, ಅಕ್ಕಮ್ಮ, ಶರಣಮ್ಮ, ಲಕ್ಷ್ಮೀ ಕಾಕಿ, ಶೇಖವ್ವ ಮಾಸರೆಡ್ಡಿ, ನಂದಾ ಧರ್ಮಾಯತ್, ಶೊಭಾ, ವೀಣಾ ಬೂದಿಹಾಳ, ಕಿಶನ್ ಮೇರವಾಡೆ, ರಾಚಯ್ಯ ಹೊಸಮಠ, ದೇವಪ್ಪ ಹೂಗಾರ, ಸುರೇಶ ಮರಳಪ್ಪನವರ, ಸಂಜು ಖಟುವಟೆ, ವಿನಾಯಕ ಹೊರಕೇರಿ, ಅರವಿಂದ ಅಣ್ಣಿಗೇರಿ, ವಿನಾಯಕ ಹಬೀಬ, ಮಂಜು ವಡ್ಡರ, ಶಂಕರ ಕರಿಬಿಷ್ಟಿ, ಶಂಕರ ಕಾಕಿ, ಉಡಚಪ್ಪ ಹಳ್ಳಿಕೇರಿ, ಮಹಾದೇವಪ್ಪ ಚಿಂಚಲಿ, ಶರಣಪ್ಪ ಕಮಡೊಳ್ಳಿ, ವಿಶ್ವನಾಥ ಟೆಂಗಿನಕಾಯಿ, ವಿನೋದ ಹಂಸನೂರ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
**ಬಾಕ್ಸ್**
ಮಹಿಳಾ ಮೋರ್ಚಾ ಗದಗ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರ ಜೀವನದಲ್ಲಿ ಆಟವಾಡುತ್ತಿದೆ. ಸರಿಯಾದ ಔಷಧೋಪಚಾರ ಇಲ್ಲದೆ ನಿರ್ಲಕ್ಷಿಸಿ ರಾಜ್ಯದಲ್ಲಿ ನೂರಾರು ಬಾಣಂತಿಯರ ಸಾವಿಗೆ ಕಾರಣವಾಗಿದ್ದು, ಅನಾಥವಾದ ಕಂದಮ್ಮಗಳ ಶಾಪ ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿಗೆ ತಟ್ಟದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.