ಬೆಂಗಳೂರು: ಧರ್ಮಸ್ಥಳದ ವಿಚಾರದಲ್ಲಿಸರ್ಕಾರವೇ ಗುಂಡಿ ತೋಡಿಕೊಂಡಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ನಾವು ರಾಜಕೀಯ ಮಾಡಿಲ್ಲ. ಹಿಂದೂ ನಂಬಿಕೆ ನಡೆದು ಬಂದ ಸ್ಥಳ. ಸರ್ಕಾರವೇ ಗುಂಡಿ ತೋಡಿಕೊಂಡಿದೆ.
Advertisement
ಗುಂಡಿ ಮುಚ್ಚಲಾಗದ ಪರಿಸ್ಥಿತಿಗೆ ಬಂದಿದೆ ಎಂದರು. ನಾವು ಇದರಲ್ಲಿ ರಾಜಕೀಯ ಮಾಡಲ್ಲ. ನಮ್ಮ ಧರ್ಮಕ್ಕೆ ಸಣ್ಣ ಅಪಚಾರವೂ ಆಗಬಾರದು. ಆ ರೀತಿ ನಾವು ನೋಡಿಕೊಳ್ತೇವೆ. ಸಾವಿರ ಬಾರಿ ಸುಳ್ಳು ಹೇಳಿದ್ರೆ ಸತ್ಯ ಆಗಲ್ಲ ಎಂದು ಟೀಕಿಸಿದ್ದಾರೆ.
ಇನ್ನೂ ಡಿ.ಕೆ.ಶಿವಕುಮಾರ್ ಅವರೇ ಹೇಳಿಕೆ ವಾಪಸ್ ಪಡೆಯಿರಿ. ಇನ್ನೊಂದು ಸಿದ್ದರಾಮಯ್ಯ ನೀವು ಆಗಬೇಡಿ. ಸಮಾಜಮುಖಿ ಕೆಲಸ ಮಾಡಿ, ಒಲೈಕೆ ಮಾಡಬೇಡಿ. ಡಿಕೆಶಿ ಬಾಯಿಯಿಂದ ಈ ಪದ ಬರಬಾರದಿತ್ತು. ಚಾಮುಂಡಿ ತಾಯಿಯ ಬಗ್ಗೆ ವಿಶ್ವ ಮಾತಾಡುತ್ತಿದೆ. ಹಿಂದುಗಳ ಭಾವನೆಗೆ ಧಕ್ಕೆ ಮಾಡಬೇಡಿ ಎಂದು ಒತ್ತಾಯಿಸಿದರು.