ಹುಕ್ಕೇರಿ:- ಕರ್ನಾಟಕ ಜನರಿಗೆ ಗಮನ ಸೆಳೆದ ಹುಕ್ಕೇರಿ ವಿದ್ಯುತ ಸಹಕಾರಿ ಸಂಘದ ಚುನಾವಣೆ ಮಾತ್ರ ಜಾರಕಿಹೊಳಿ ಮತ್ತು ಕತ್ತಿ ಕುಟುಂಬದ ಮಧ್ಯ ಭಾರಿ ಶಕ್ತಿ ಪ್ರದರ್ಶನ ನಡೀತಾ ಇದ್ದು, ವಿದ್ಯುತ ಸಂಘದ ಚುನಾವಣೆಗಾಗಿ ಅಪ್ಪನಗೌಡ ಪಾಟೀಲ ಪ್ಯಾನಲ ವತಿಯಿಂದ ಕೆಲ ಅಭ್ಯರ್ಥಿಗಳ ಘೋಷಣೆ ಆಗಿದ್ದರೆ ಇನ್ನೂ ಕೆಲ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.
ಮಾಜಿ ಸಂಸದ ರಮೇಶ ಕತ್ತಿ , ಮಾಜಿ ಸಚಿವ ಎ. ಬಿ. ಪಾಟೀಲ ಪ್ಯಾನಲ ವತಿಯಿಂದ ಮಾತ್ರ ಯಾವುದೆ ಅಭ್ಯರ್ಥಿಗಳ ಅಧಿಕೃತ ಘೋಷಣೆ ಅಂತೂ ಇನ್ನೂ ವರೆಗೂ ಮಾಡಿಲ್ಲ.
ಆದರೆ ವಿದ್ಯುತ ಸಂಘದ ಚುನಾವಣೆಯಲ್ಲಿ , ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅನುಭವಿ ವೆಕ್ತಿ , ಸಂಕೇಶ್ವರ ನಗರದ ಹಿರಿಯ ರಾಜಕಾರಣಿ , ಶಾಂತ ಸ್ವಭಾವದ ವೆಕ್ತಿ ಮಹತ್ವ ಹೊಂದಿರುವ ಹಾಲುಮತ ಸಮಾಜದ ಮುಖಂಡ , ಶ್ರೀ ಗಜಾನನ ಕೊಳ್ಳಿ ಅವರಿಗೆ ವಿದ್ಯುತ ಸಂಘದ ಅಭ್ಯರ್ಥಿ ಸ್ಥಾನ ನೀಡಿ ಚುನಾವಣಾ ಅಖಾಡಕ್ಕೆ ಇಳಿಸಬೇಕು ಎಂದು ಸಂಕೇಶ್ವರ ನಗರದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡಿತಾ ಇದ್ದು , ಯಾವ ಬಣದಿಂದ ಯಾರಿಗೆ ಅಖಾಡಕ್ಕೆ ಇಳಿಸುತ್ತಾರೆ ಅನ್ನುವುದೇ ಅಚ್ಚರಿ ಮೂಡಿಸಿದೆ.



