ಬೆಂಗಳೂರು: ಹೈಕಮಾಂಡ್ ಸಚಿವ ಸ್ಥಾನ ಕೊಟ್ಟಿರೋದು ಓಡಾಡಿಕೊಂಡು ಇರೋದಕ್ಕೆ ಅಲ್ಲ ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಸಚಿವ ಸ್ಥಾನ ಕೊಟ್ಟಿರೋದು ಓಡಾಡಿಕೊಂಡು ಇರೋದಕ್ಕೆ ಅಲ್ಲ.
ಪಕ್ಷ ಕೊಟ್ಟಿರೋ ಭರವಸೆ ಈಡೇರಿಸೋದು, ಇಲಾಖೆಯಲ್ಲಿ ಕೊಟ್ಟಿರೋ ಜವಾಬ್ದಾರಿ, ಅಭಿವೃದ್ಧಿ ಕೆಲಸ ಮಾಡಬೇಕು. ಸಚಿವರು ಕಾರಿನಲ್ಲಿ ಓಡಾಡಿಕೊಂಡು ಕೂತಿದ್ರೆ ಆಗೊಲ್ಲ. ಪಕ್ಷದ ಹೆಸರು, ವರ್ಚಸ್ಸು ವೃದ್ಧಿ ಮಾಡೋ ಜವಾಬ್ದಾರಿ ಶಾಸಕರು ಮತ್ತು ಮಂತ್ರಿಗಳ ಮೇಲೆ ಇದೆ.
ಮಂತ್ರಿಗಳಾಗಿ ನಮಗೆ ಕೊಟ್ಟಿರೋ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿದ್ದಾರಾ ಅಂತ ತಿಳಿಯಲು ವರದಿ ಕೇಳಿದ್ದಾರೆ ಎಂದರು. ವರದಿ ಪಡೆಯೋ ಅಧಿಕಾರ ಹೈಕಮಾಂಡ್ಗೆ ಇದೆ. ವರದಿ ಕೊಟ್ಟ ಮೇಲೆ ಹೈಕಮಾಂಡ್ ನಾಯಕರು ನೋಡ್ತಾರೆ. ಯಾರು ಕೆಲಸ ಮಾಡ್ತಾರೆ, ಇವರಿಗೆ ಎಚ್ಚರಿಕೆ ಕೊಡಬೇಕಾ? ಇನ್ನು ಏನಾದ್ರು ಸೂಚನೆ ಕೊಡಬೇಕಾ? ಉತ್ತಮ ಕೆಲಸ ಮಾಡಿದ್ರೆ ಪ್ರೋತ್ಸಾಹ ಕೊಡಬೇಕಾ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.