ಸಾರಸ್ವತ ಲೋಕದ ಮೇರುಪರ್ವತ

0
Spread the love

ಸಾರಸ್ವತ ಲೋಕದ ಮೇರುಪರ್ವತ ಎಸ್.ಎಲ್. ಬೈರಪ್ಪ
ನೇರ, ನಿಷ್ಟುರ, ನಿರ್ಭೀತ, ಚಿಂತನಶೀಲ ಲೇಖಕ

Advertisement

ಬಡತನದಲ್ಲಿ ಮಿಂದೆದ್ದರೂ ಸಾಹಿತ್ಯದಲ್ಲಿ ಸಿರಿವಂತ
ವಾಸ್ತವಿಕ ಜಗತ್ತನ್ನು ಕಾದಂಬರಿ ಮೂಲಕ ತೋರಿಸಿದ ಮಾಂತ್ರಿಕ

ಧರ್ಮಶ್ರೀ ಮೂಲಕ ಧರ್ಮರಕ್ಷಣೆಗೆ ಹಾತೊರೆದ ನಾಯಕ
ಪದ್ಮಭೂಷಣ, ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತ

ದೇಶಭಕ್ತ, ಸೃಜನಶೀಲ, ವಿಶಿಷ್ಟ ಬರಹಗಾರ
ಸಾಹಿತ್ಯದ ಲೋಕದಲ್ಲಿ ಇವರ ಹೆಸರು ಅಜರಾಮರ

ಒಂದೊಂದು ಕಾದಂಬರಿಯಲ್ಲೂ ಒಂದೊಂದು ಸಂದೇಶ
ಸಾಹಿತ್ಯದ ವಂಶವೃಕ್ಷಕ್ಕೆ ನೀರೆರೆದ ಮಹಾನುಭಾವ

ಹಲವಾರು ಭಾಷೆ ಓದುಗ ಅಭಿಮಾನಿಗಳ ಕಣ್ಮಣಿ
ಕನ್ನಡಾಂಬೆಯ ಜನರೆಲ್ಲರೂ ಇವರಿಗೆ ಚಿರಋಣಿ

ಬಲಪಂಥೀಯ ಭೀಮಕಾಯದ ಹಿರಿಯ ಸಾಹಿತಿ
ಅಷ್ಟದಿಕ್ಕುಗಳಲ್ಲಿ ಹರಡಿತ್ತು ಇವರ ಜ್ಞಾನದ ಕೀರ್ತಿ

ಇಂದಿನ ಸಾಹಿತಿಗಳಿಗೆ ಕಾದಂಬರಿ ಭೀಷ್ಮನ ಆದರ್ಶಗಳು ದಾರಿದೀಪವಾಗಲಿ
ಭಗವಂತನು ಬೈರಪ್ಪನವರ ಆತ್ಮಕ್ಕೆ ಚಿರಶಾಂತಿ ನೀಡಲಿ

— ಅಂಜನಾ ರಾಘವೇಂದ್ರ ಕುಬೇರ,
ಗದಗ.


Spread the love

LEAVE A REPLY

Please enter your comment!
Please enter your name here