ವಿಜಯನಗರ:- ಪ್ರಯಾಣಿಕರೊಬ್ಬರು ಬಸ್ ನಲ್ಲಿ ಮರೆತು ಬಿಟ್ಟು ಹೋಗಿದ್ದ ಬೆಳ್ಳಿ, ಬಂಗಾರ ನಗದು ಇದ್ದ ಬ್ಯಾಗ್ ಅನ್ನು ವಾಪಸ್ ಕೊಡುವ ಮೂಲಕ KSRTC ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಬಸ್ ಡಿಪೋದಲ್ಲಿ ಘಟನೆ ಜರುಗಿದೆ. ಬಸ್ ಕ್ಲೀನಿಂಗ್ ಸಿಬ್ಬಂದಿಗಳಿಗೆ ಪ್ರಯಾಣಿಕ ಬಿಟ್ಟು ಹೋಗಿದ್ದ ಚಿನ್ನ, ಬೆಳ್ಳಿ, ಬಂಗಾರ ನಗದು ಇರುವ ಬ್ಯಾಗ್ ಸಿಕ್ಕಿದೆ. ಹೊಸಪೇಟೆ – ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಈ ಬಸ್ ಸಂಚಾರ ಮಾಡಿದ್ದು, ಡ್ಯೂಟಿ ಟೈಮ್ ಮುಗಿದ ಬಳಿಕ ಚಾಲಕ ಡಿಪೋದಲ್ಲಿ ಬಸ್ ತಂದು ನಿಲ್ಲಿಸಿದ್ದಾನೆ. ಬಳಿಕ ಕ್ಲೀನರ್ ಸಿಬ್ಬಂದಿ ಬಸ್ ಸ್ವಚ್ಚತೆ ಮಾಡುವ ವೇಳೆ ಬ್ಯಾಗ್ ವೊಂದು ಕಣ್ಣಿಗೆ ಬಿದ್ದಿದೆ. ಪರಿಶೀಲನೆ ಮಾಡಿ ನೋಡಿದಾಗ 2.80 ಲಕ್ಷ ಬೆಲೆ ಬಾಳುವ ಬೆಳ್ಳಿ ಬಂಗಾರ, 530 ನಗದು ಪತ್ತೆ ಆಗಿದೆ.
ಬ್ಯಾಗ್ ನಲ್ಲಿದ್ದ ಐಡಿ ಕಾರ್ಡ್ ನಲ್ಲಿರೋ ಮೊಬೈಲ್ ನಂಬರ್ ಮುಖೇನ ಮಾಲೀಕರನ್ನ ಸಂಪರ್ಕ ಮಾಡಿದ್ದಾರೆ. ಮೂಲ ಮಾಲೀಕರಾದ ಮೈಮುನ್ನಿಸಾ ಬೇಗಂರಿಗೆ ಬಂಗಾರ, ನಗದನ್ನು ಸಿಬ್ಬಂದಿ ಹಿಂತಿರುಗಿಸಿದ್ದಾರೆ.
ಬಸ್ ಕ್ಲೀನರ್ ನ ಪ್ರಾಮಾಣಿಕತೆಗೆ ಇಲಾಖೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದುಕೊಂಡಿದ್ದ ಬಂಗಾರ, ಬೆಳ್ಳಿ, ನಗದು ವಾಪಸ್ ಸಿಕ್ಕಿದ್ದಕ್ಕೆ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.