ಹಾಸನ: ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಠಾಣಾ ಎಸ್ ಎಚ್.ಒ ಭಾನುಪ್ರಕಾಶ್ ಇವರು ತಮ್ಮ ಎದುರು ಹಾಸನ ತಾಲ್ಲೂಕು ಬಿಟ್ಟಗೌಡನಹಳ್ಳಿ ಗ್ರಾಮದ ಕೌಟುಂಬಿಕ ಕಲಹದ ತಿರ್ಮಾನ ಮಾಡುವ ಸಮಯದಲ್ಲಿ ಠಾಣೆಯಲ್ಲಿ ಇದ್ದ ಪತಿ ಪತ್ನಿಯ ಚಾಕುವಿನಿಂದ ಮಹಿಳೆ ಕತ್ತನ್ನು ಸೀಳಿದ ಘಟನೆ ಹಾಸನ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹಲ್ಲೆಯಾದ ಮಹಿಳೆ ಶೈಲಾ( 28) ಆಗಿದ್ದು. ಮಹಿಳೆಯ ಪತಿ ಹರೀಶ್ ( 34)ಆರೋಪಿಯಾಗಿದ್ದಾನೆ. ಇಬ್ಬರ ನಡುವೆ ಸಂಸಾರದಲ್ಲಿ ಗಲಾಟೆ ನಡೆದು ಪತಿ ಪತ್ನಿ ಶಿಲದ ಬಗ್ಗೆ ಸಂಶಯ ಪಡುತ್ತಿದ್ದು. ಇದೇ ಕಾರಣಕ್ಕೆ ಆರೋಪಿ ಏಕಾಏಕಿ ಚಾಕುವಿನಿಂದ ಕತ್ತಿನ ಬಳಿ ಕೂಯ್ದಿದ್ದಾನೆ. ನಡೆಸಿದ್ದಾನೆ. ಈ ವೇಳೆ ಮಹಿಳೆಯ ಕಿವಿ ಕತ್ತರಿಸಿ ಹೋಗಿದ್ದು, ಮಹಿಳೆಯನ್ನು ಮಂಗಳಾ ಆಸ್ಪತ್ರೆಗೆ ಚಿಕಿತ್ಸಗೆ ದಾಖಲು ಮಾಡಲಾಗಿದೆ.
ಈ ಬಗ್ಗೆ ಮಹಿಳಾ ಠಾಣೆ ಪಿಎಸ್ಐ ನಗರ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಆರೋಪಿ ಠಾಣೆಯಲ್ಲಿ ತೀರ್ಮಾನ ಮಾಡುವ ಸಮಯದಲ್ಲಿ ಠಾಣೆಯಿಂದ ಹೊರಗೆ ಹೋಗಿ ಚಾಕು ತಂದು ಮಹಿಳೆ ಕತ್ತನ್ನು ಸೀಳಿರುವುದಾಗಿ ತಿಳಿದು ಬಂದಿದೆ.