ವಿಜಯನಗರ:- ಹಾಡಹಗಲೇ ಪತ್ನಿಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಪತಿ ಕೊಲೆಗೈದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಲುಗೋಡು ಗ್ರಾಮದಲ್ಲಿ ಜರುಗಿದೆ.
ಚಿಲುಗೋಡು ಗ್ರಾಮದ ಆನಂದ ದೇವನಹಳ್ಳಿಯ 26 ವರ್ಷದ ಬಸವರಾಜ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಅದೇ ಗ್ರಾಮದ ಬಸರುಕೋಡು ಫಕ್ಕೀರಸ್ವಾಮಿ ಕೊಲೆ ಮಾಡಿದ ಪತಿ ಆಗಿದ್ದಾನೆ.
ಈತ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹಾಡಹಗಲೇ ಕೊಡಲಿಯಿಂದ ತಲೆಗೆ ಮತ್ತು ಕುತ್ತಿಗೆಗೆ ಬಲವಾಗಿ ಹೊಡೆದು ಸಾಯಿಸಿದ್ದಾನೆ. ಕೊಲೆ ಮಾಡಿದ ತಾನೇ ತಂಬ್ರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಆರೋಪಿ ಶರಣಾಗಿದ್ದಾನೆ.
ಕಳೆದ ಮೂರು ತಿಂಗಳ ಹಿಂದೆ ಫಕ್ಕೀರಸ್ವಾಮಿಯ ಪತ್ನಿ ಕಾಣೆಯಾಗಿದ್ದಳು. ತಂಬ್ರಹಳ್ಳಿ ಪೊಲೀಸ್ ಠಾಣೆ ದೂರು ದಾಖಲಿಸಿದ ಬಳಿಕ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆಂದು ತಿಳಿದು ಬಂದಿತ್ತು. ಇದೀಗ ವಾಪಸ್ಸಾಗಿ ಎರಡು ತಿಂಗಳು ಕಳೆದಿತ್ತು.
ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ, ತಂಬ್ರಹಳ್ಳಿ ಪಿಎಸ್ಐ ಗುರುಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.