ಬೆಂಗಳೂರು:- ಕೌಟುಂಬಿಕ ಕಲಹದಿಂದ ಪತ್ನಿಯನ್ನು ಸ್ಮಶಾನಕ್ಕೆ ಕರೆದೊಯ್ದು ಪಾಪಿ ಗಂಡ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಬನಶಂಕರಿ ಲೇಔಟ್‌ನಲ್ಲಿ ಜರುಗಿದೆ.
ಇನ್ನೂ ಆರೋಪಿ ಗಂಡನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 26 ವರ್ಷದ ಗೌರಿ ಮೃತ ಮಹಿಳೆ ಆಗಿದ್ದು, ನಾಗೇಶ್ ಕೊಲೆ ಆರೋಪಿ. ನಿನ್ನೆ ಸಂಜೆ 7.30 ಸುಮಾರಿಗೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಇಂದು ಬೆಳಗ್ಗೆ ಸ್ಥಳೀಯರು ನೋಡಿ 112ಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಮೃತದೇಹವನ್ನು ಆರ್.ಆರ್.ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
7 ರಿಂದ 8 ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿ ಮದುವೆ ಆಗಿದ್ದರು. ಆಗಾಗ ಕೌಟುಂಬಿಕ ಸಮಸ್ಯೆಯಿಂದ ಇವರು ಜಗಳ ಮಾಡಿಕೊಳ್ಳುತ್ತಿದ್ದರು. 5 ವರ್ಷಗಳಿಂದ ಬೇರೆ ಊರಲ್ಲಿ ಹೆಂಡತಿಯನ್ನು ಇಟ್ಟಿದ್ದ ನಾಗೇಶ್, 3 ದಿನಗಳ ಹಿಂದೆ ಪತ್ನಿಯನ್ನು ಮನೆಗೆ ಕರೆತಂದಿದ್ದ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಸ್ಮಶಾನಕ್ಕೆ ಕರೆದೊಯ್ದು ಪತ್ನಿಯನ್ನು ಗಂಡ ನಾಗೇಶ್ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.