HomeGadag Newsಕಾಂಗ್ರೆಸ್‌ನ ಹಗ್ಗ ಜಗ್ಗಾಟದ ಪರಿಣಾಮ ರೈತರ ಮೇಲೆ

ಕಾಂಗ್ರೆಸ್‌ನ ಹಗ್ಗ ಜಗ್ಗಾಟದ ಪರಿಣಾಮ ರೈತರ ಮೇಲೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ಸಾಕಷ್ಟು ಯೂರಿಯಾ ಗೊಬ್ಬರವನ್ನು ರಾಜ್ಯಕ್ಕೆ ಪೂರೈ

ಕೆ ಮಾಡಿದರೂ ಅದನ್ನು ರೈತರಿಗೆ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಗದಗ ಶಹರ, ಗ್ರಾಮೀಣ ಮಂಡಲ, ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಗದಗ ನಗರದ ಗಾಂಧಿ ವೃತ್ತದಲ್ಲಿ ಸಾಂಕೇತಿಕ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ವಿಜ್ಞಾನಿಗಳು ಮಳೆ ಎಷ್ಟು ಆಗುತ್ತದೆ ಎಂಬುದರ ಬಗ್ಗೆ ಮೊದಲೇ ರಾಜ್ಯ ಸರ್ಕಾರಕ್ಕೆ ತಿಳಿಸಿದರೂ ಕೃಷಿ ಸಚಿವ ಚಲುವರಾಯಸ್ವಾಮಿರವರು ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೆ ಇರುವುದರಿಂದ ಗೊಬ್ಬರದ ಕೊರತೆಯಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡುವೆ ಹಗ್ಗ ಜಗ್ಗಾಟ ನಡೆದಿದ್ದು, ಇದರಿಂದ ಚಿಕ್ಕ ಹಾಗೂ ಮಧ್ಯಮ ರೈತರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರ ಮುಂಗಾರು ಹಂಗಾಮಿಗಾಗಿ ಸಾಕಷ್ಟು ಯೂರಿಯಾ ಗೊಬ್ಬರವನ್ನು ಪೂರೈಸಿದರೂ ರಾಜ್ಯ ಸರ್ಕಾರ ಅದನ್ನು ಸರಿಯಾಗಿ ರೈತರಿಗೆ ಮುಟ್ಟಿಸದೆ ಅನ್ಯಾಯವೆಸಗಿದೆ. ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಇದರಿಂದ ತೊಂದರೆಯಾಗುತ್ತಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆಯಾಗಿದ್ದು, ಅದಕ್ಕೆ ತಕ್ಕಂತೆ ಗೊಬ್ಬರದ ದಾಸ್ತಾನು ಇಡದೆ ರೈತರಿಗೆ ತೊಂದರೆ ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪನವರು ಆಡಳಿತದಲ್ಲಿದ್ದಾಗ ಗೊಬ್ಬರ ಖರೀದಿಗಾಗಿ 1 ಸಾವಿರ ಕೋಟಿ ರೂ ಆವರ್ತ ನಿಧಿ ಇಟ್ಟಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ 400 ಕೋಟಿ ರೂ ಇಟ್ಟಿದ್ದರಿಂದ ಹೆಚ್ಚಿನ ಗೊಬ್ಬರವನ್ನು ದಾಸ್ತಾನು ಮಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರೀಗೌಡ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಪ್ರಮುಖರಾದ ರವಿ ದಂಡಿನ, ಭದ್ರೇಶ ಕುಸ್ಲಾಪೂರ, ಬಸವಣ್ಣೆಪ್ಪ ಚಿಂಚಲಿ, ಜಗನ್ನಾಥಸಾ ಭಾಂಡಗೆ, ನಿರ್ಮಲಾ ಕೊಳ್ಳಿ, ನಗರ ರೈತ ಮೋರ್ಚಾ ಅಧ್ಯಕ್ಷ ಶಂಕರ ಕರಬಿಷ್ಠಿ, ಗ್ರಾಮೀಣ ಅಧ್ಯಕ್ಷ ಸಿದ್ದಪ್ಪ ಜೊಂಡಿ ಸಂದರ್ಭೊಚಿತವಾಗಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಶ್ರೀಪತಿ ಉಡುಪಿ, ಸಿದ್ದು ಪಲ್ಲೇದ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ನಿಂಗಪ್ಪ ಮಣ್ಣೂರ, ಚಂದ್ರು ತಡಸದ, ನಾಗರಾಜ ತಳವಾರ, ಶಶಿಧರ ದಿಂಡೂರ, ಮಹೇಶ ಶಿರಹಟ್ಟಿ, ರಾಜು ಕುಲಕರ್ಣಿ, ಉಷಾ ದಾಸರ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ರೇಖಾ ಬಂಗಾರಶೆಟ್ಟರ, ಪದ್ಮಿನಿ ಮುತ್ತಲದಿನ್ನಿ, ವಾಯ್.ಪಿ. ಅಡ್ನೂರ, ಪಕ್ಕೀರಪ್ಪ ಗೋಡಿ, ಕೆ.ಪಿ. ಕೋಟಿಗೌಡ್ರ, ರಾಚಯ್ಯ ಹೊಸಮಠ, ಗುರುಶಾಂತಗೌಡ ಮರಿಗೌಡ್ರ, ಅಮರನಾಥ ಗಡಗಿ, ರಮೇಶ ಸಜ್ಜಗಾರ, ಅಶೋಕ ಕರೂರ, ಅರವಿಂದ ಕೇಲೂರ, ಶಂಕರ ಕಾಕಿ, ನವೀನ ಕೊಟೆಕಲ್, ರಾಹುಲ್ ಸಂಕಣ್ಣವರ, ಕುಮಾರ ಮಾರನಬಸರಿ, ಶೇಖಣ್ಣ ಕನ್ಯಾಳ, ಸಂಜೀವ ಖಟವಟೆ, ದೇವೆಂದ್ರಪ್ಪ ಹೂಗಾರ, ಪಂಚಾಕ್ಷರಿ ಅಂಗಡಿ, ಅರವಿಂದ ಅಣ್ಣಿಗೇರಿ, ಸುರೇಶ ಹೆಬಸೂರ, ಬಸವರಾಜ ಮಡಿವಾಳರ, ಗಂಗಾಧರ ಮೇಲಗಿರಿ, ಶಂಕರ ಮಲ್ಲಸಮುದ್ರಾ, ಬಸವರಾಜ ಹಲಾಪೂರ, ಭಾಗಪ್ಪ ವಗ್ಗರ, ಈರಣ್ಣ ಗಡಗಿ, ಮಂಜುನಾಥ ಹಳ್ಳೂರಮಠ, ಈರಣ್ಣ ಅಂಗಡಿ, ಮಹಾದೇವಪ್ಪ ಚಿಂಚಲಿ, ನಿಂಗಪ್ಪ ಬೂಶಿಯವರ, ಪ್ರೀತಿ ಶಿವಪ್ಪಯ್ಯನಮಠ, ಕಮಲಾಕ್ಷೀ ಗೊಂದಿ, ಯೋಗೇಶ್ವರಿ ಭಾವಿಕಟ್ಟಿ, ಸ್ವಾತಿ ಅಕ್ಕಿ, ಸುಮಂಗಲಾ ಕೊನೆವಾಲ, ಕಮಲಾಕ್ಷೀ ತೆಕ್ಕಲಕೋಟಿ, ಸಾವಿತ್ರಿ ಪಾಟೀಲ, ಸೋಮಣ್ಣ ಪುರದ, ಪ್ರಭು ಕಲ್ಬಂಡಿ, ಮಲ್ಲಪ್ಪ ಕರಿಬಿಷ್ಠಿ, ವೀರಣ್ಣ ಗಡಗಿ, ಸೋಮಣ್ಣ ನಡೂರ, ಜಡಿಯಪ್ಪ ಲದ್ದಿ, ಮಾಂತೇಶ ಕಾತರಕಿ, ಮಂಜುನಾಥ, ವಿನೋದ ಹಂಸನೂರ ಸೇರಿದಂತೆ ರೈತರು, ಪ್ರಮುಖರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ ಪೂರೈಸಿದ ಯೂರಿಯಾ ಗೊಬ್ಬರವನ್ನು ಕಾಂಗ್ರೆಸ್ ಪುಢಾರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಶ್ರೀಮಂತ ಕಾಂಗ್ರೆಸ್ ಪರ ರೈತರ ಮನೆಯಲ್ಲಿ ನೂರಾರು ಚೀಲ ಯೂರಿಯಾ ಗೊಬ್ಬರ ದಾಸ್ತಾನಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೆಚ್ಚುವರಿ ಗೊಬ್ಬರವನ್ನು ರೈತರಿಗೆ ತಲುಪಿಸಬೇಕು.

– ರಾಜು ಕುರುಡಗಿ.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!