ವಿಜಯಸಾಕ್ಷಿ ಸುದ್ದಿ, ಗದಗ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆದ ಪ್ರಕರಣ ಇಡೀ ಭಾರತದ ಜನತೆ ತಲೆ ತಗ್ಗಿಸುವ ಕೃತ್ಯವಾಗಿದೆ ಎಂದು ಗದಗ ಜಿಲ್ಲಾ ಬಂಜಾರ ಹೋರಾಟಗಾರ ಮತ್ತು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಸೋಮಪ್ಪ ಪಾಂಡಪ್ಪ ಲಮಾಣಿ ಖಂಡಿಸಿದ್ದಾರೆ.
Advertisement
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿಶೋರ್ ಅನ್ನುವ ವಕೀಲ ತಾನೊಬ್ಬ ವಿದ್ಯೆ ಇಲ್ಲದ ಅನಾಗರಿಕನಂತೆ ವರ್ತಿಸಿ ನ್ಯಾಯಮೂರ್ತಿಗಳ ಮೇಲೆ ಅಗೌರವವಾಗಿ ನಡೆದುಕೊಂಡಿದ್ದು ಇಡೀ ಭಾರತದ ಪ್ರಜೆಗಳಿಗೆ ನೋವಾಗಿದೆ. ಭಾರತೀಯರಾದ ನಾವು ಸಮಾನತೆಯ ಬದುಕು ಬಾಳುತ್ತಿದ್ದೇವೆ. ಇಂಥ ದೇಶದ್ರೋಹಿಗಳ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.


