ಬೆಳಗಾವಿ: ಬೆಳಗಾವಿ 2ನೇ ರಾಜಧಾನಿ ಆದರೆ ನನಗೂ ಬಹಳ ಸಂತಸ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಇಂದು ಬೆಳಗಾವಿ ಸುವರ್ಣಸೌಧ ಪರಿಶೀಲನೆ ಮಾಡಿದ್ದು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಡಿಸಿ ರೋಷನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ ಸೇರಿ ಹಲವರು ಸಾಥ್ ನೀಡಿದರು.
ಬಳಿಕ ಬೆಳಗಾವಿ ರಾಜ್ಯದ 2ನೇ ರಾಜಧಾನಿ ಆಗುತ್ತಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕೇಳಬೇಕು. ಬೆಳಗಾವಿ 2ನೇ ರಾಜಧಾನಿ ಆದರೆ ನನಗೂ ಬಹಳ ಸಂತಸ. ನನ್ನ ಸಲಹೆಯನ್ನು ಅಲ್ಲಿ ಹೇಳುತ್ತೇನೆ ಎಂದರು.
ಇನ್ನೂ ಅನುಭವ ಮಂಟಪದ ಬಿಲ್ ಬಂದ ಕೂಡಲೇ ಮಾಹಿತಿ ನೀಡುತ್ತೇವೆ. ಚಿತ್ರಕಲಾ ಪರಿಷತ್ನಿಂದ ಆ ಕಲಾಕೃತಿ ಮಾಡಲಾಗಿದೆ. ಸುವರ್ಣಸೌಧದ ವಿಧಾನಸಭಾ ಸಭಾಧ್ಯಕ್ಷದ ಪೀಠ ಕರ್ನಾಟಕ ರಾಜ್ಯ ಅರಣ್ಯ ನಿಗಮ ಸಿದ್ದಪಡಿಸಿದೆ. ಇದಕ್ಕೆ ಅಂದಾಜು 45 ಲಕ್ಷ ರೂ. ವೆಚ್ಚ ತಗುಲಿದೆ. ಒಟ್ಟು 25 ಕೋಟಿ ರೂ. ಬೆಳಗಾವಿ ಅಧಿವೇಶಕ್ಕೆ ಖರ್ಚು ಆಗಲಿದೆ ಎಂದು ಹೇಳಿದ್ದಾರೆ.