ತುಮಕೂರು: ತುಮಕೂರು ರೈಲ್ವೆ ನಿಲ್ದಾಣಕ್ಕೆ ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೇ ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು,
ಸಿದ್ದರಾಮಯ್ಯ ನಾಳೆ ದೆಹಲಿಗೆ ಬರ್ತಿದ್ದಾರೆ. ದೆಹಲಿಯಲ್ಲಿ ಕನ್ನಡ ಭವನ ಉದ್ಘಾಟನೆಗೆ ಬರ್ತಿದ್ದಾರೆ. ರೈಲ್ವೆ ಸ್ಟೇಷನ್ ಮಾಡೋದು ಕೇಂದ್ರ ಸರ್ಕಾರ. ಸಿದ್ದರಾಮಯ್ಯ ಯಾಕೆ ಇನ್ನು ಫೈಲ್ ನೋಡಿಲ್ಲ ಅಂತ ಗೊತ್ತಿಲ್ಲ.
ಪರಮೇಶ್ವರ್, ರಾಜಣ್ಣ, ಡಿಸಿಎಂ ಶಿವಕುಮಾರ್ ಅವರ ಗಮನಕ್ಕೂ ತರುತ್ತೇನೆ. ನಾಳೆ ಸ್ವತಃ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೀನಿ. ಫೈಲ್ ಕಳುಹಿಸಿ ಐದು ತಿಂಗಳ ಮೇಲಾಗಿದೆ. ನಾನು ಇದಕ್ಕೆ ಉಪ್ಪು-ಖಾರ ಹಾಕಲ್ಲ. ಶ್ರೀಮಠ ಯಾರಿಗೂ ಸೀಮಿತವಲ್ಲ ಎಂದರು.
ಸರ್ಕಾರ ನಮ್ಮ ಕೊಳಕು ಮುಚ್ಚಿಗೊಳ್ಳಲು ತಮ್ಮ ತಪ್ಪು ಮುಚ್ಚಿಕೊಳ್ಳಲು ಸಾಮಾನ್ಯ ಜನರ ಮೇಲೆ ಗದಾ ಪ್ರಹಾರ ಮಾಡ್ತಿದ್ದಾರೆ. ತುಂಬಾ ದಿನ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ನಡೆಯಲ್ಲ. ಇದು ಮಾಡೋದ್ರಿಂದ ಎಂತ ದುಷ್ಪರಿಣಾಮ ಬೀರಲಿದೆ ಅಂತ ಅರ್ಥಮಾಡಿಕೊಳ್ಳಬೇಕು ಎಂದರು.