ಬೆಂಗಳೂರು:- ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದು ಅಹಿಂದ ನಾಯಕತ್ವಕ್ಕೆ ವಿನಃ ಸಿಎಂ ಸ್ಥಾನಕ್ಕೆ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಸಿದ್ದರಾಮಯ್ಯ ಹೇಳಿರೋದೇ ಬೇರೆ. ಸಿಎಂ ಸ್ಥಾನವಾಗಲೀ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಹೇಳಿಲ್ಲ ಎಂದು ಯತೀಂದ್ರ ಹೇಳಿಕೆಯನ್ನ ಸಚಿವ ಸತೀಶ್ ಜಾರಕಿಹೊಳಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ.
ನಾನು 30 ವರ್ಷದಿಂದ ಅಹಿಂದ ಭಾಗ. ಜೆಡಿಎಸ್‌ನಲ್ಲಿ ಇದ್ದಾಗಲೂ ಅಹಿಂದ ಭಾಗವೇ, ಈಗಲೂ ಅಹಿಂದ ಭಾಗವೇ. ಪರಮೇಶ್ವರ್, ಮಹದೇವಪ್ಪ ಎಲ್ಲರೂ ಅಹಿಂದ ಭಾಗವೇ. ಯತೀಂದ್ರ ಎಲ್ಲಿಯೂ ಸಿಎಂ ಸ್ಥಾನವಾಗಲೀ. ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಕೇಳಿಲ್ಲ ಎಂದಿದ್ದಾರೆ.
ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಹೇಳಿರೋದೇ ಬೇರೆ. ನಾವೇನೂ ಸಿಎಂ ಸ್ಥಾನ ಕೇಳಿಲ್ಲ. ಯಾರು ಯತೀಂದ್ರ ಹೇಳಿಕೆ ವಿರೋಧಿಸುತ್ತಿದ್ದಾರೋ, ಅವರು ತಪ್ಪು ತಿಳಿದುಕೊಂಡಿದ್ದಾರೆ. ಅಹಿಂದ ಒಕ್ಕೂಟ, ಅಹಿಂದ ಹೋರಾಟ ಮೊದಲಿನಿಂದಲೂ ಇದೆ ಎಂದಿದ್ದಾರೆ.


