ದಿ. ಕೆ.ಎಚ್. ಪಾಟೀಲ ಅಜರಾಮರ

0
kareemsab
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಹಕಾರಿ ರಂಗದ ಬೀಷ್ಮ, ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮಖಂಡರಾದ ದಿ. ಕೆ.ಎಚ್. ಪಾಟೀಲ್ ಅವರ ಹೆಸರನ್ನು ಬೆಂಗಳೂರಿನ ವಾರ್ಡ್ ನಂ.18, ರಾಧಾಕೃಷ್ಣ ವಾರ್ಡಿನ ಎಂ.ಎಸ್. ರಾಮಯ್ಯ ಸಿಗ್ನಲ್‌ನಿಂದ ಅಶ್ವಥ ನಗರದ ರಸ್ತೆಗೆ ನಾಮಕರಣ ಮಾಡಿರುವುದಕ್ಕೆ ಕಾಂಗ್ರೆಸ್ ಮುಖಂಡ ಕರೀಮಸಾಬ ಸುಣಗಾರ ಬೆಂಗಳೂರು ಮಹಾನಗರ ಪಾಲಿಕೆಯನ್ನು ಅಭಿನಂದಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಲಕೋಟಿಯ ಹುಲಿ ಎಂದೇ ಖ್ಯಾತರಾದ ದಿ. ಕೆ.ಎಚ್. ಪಾಟೀಲ್ ಅವರ ಹೆಸರನ್ನು ನಾಮಕಾರಣ ಮಾಡುವ ಮೂಲಕ ಅವರ ಆದರ್ಶ ಬದುಕನ್ನು ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿಸಲು ಮುಂದಾಗಿರುವದು ಅಭಿನಂದನಾರ್ಹ ವಿಚಾರವಾಗಿದೆ. ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ಗದಗ ನಗರಕ್ಕೆ ಆಹ್ವಾನಿಸಿ ಗದಗ ಜನತೆಗೆ ದರ್ಶನ ಭಾಗ್ಯ ಕಲ್ಪಿಸಿದ, ಶ್ರೇಷ್ಠ ರಾಜಕೀಯ ವ್ಯಕ್ತಿತ್ವದ ಮೂಲಕ ದೇಶದ ರಾಜಕೀಯ ರಂಗದಲ್ಲಿ ತಮ್ಮ ಸೃಜನಾತ್ಮಕ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೆಸರವಾಸಿಯಾಗಿರುವ ದಿ. ಕೆ.ಎಚ್. ಪಾಟೀಲರ ಕೀರ್ತಿ ಅಜರಾಮರವಾಗಿರುವುದು ಗದಗ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಮರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here