ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಡಗುಂದಿಕೊಪ್ಪದಲ್ಲಿ ಫೆ.20ರಂದು ನಡೆಯಲಿರುವ ಗಜೇಂದ್ರಗಡ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೋಡಿಕೊಪ್ಪದ ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ ಅವರನ್ನು ರೋಣ ಶಾಸಕ ಜಿ.ಎಸ್. ಪಾಟೀಲರು ಅಧಿಕೃತ ಆಹ್ವಾನವನ್ನು ನೀಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಆಮಂತ್ರಿಸಿದರು.
ಕೋಡಿಕೊಪ್ಪದಲ್ಲಿನ ಹಿರೆವಡೆಯರ ಅವರ ನಿವಾಸಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ ಮತ್ತು ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ ಮತ್ತು ಕನ್ನಡಾಭಿಮಾನಿಗಳೊಂದಿಗೆ ಆಗಮಿಸಿ ಆಮಂತ್ರಿಸಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಹಿರೆವಡೆಯರ ಗುರುಗಳ ಜ್ಞಾನ ಅಪಾರವಾದುದು. ವಯೋವೃದ್ಧರೂ, ಜ್ಞಾನವೃದ್ಧರೂ ಆಗಿರುವ ಅವರಿಗೆ ಸಂದಿರುವ ಈ ಗೌರವ ನಿಜಕ್ಕೂ ಸ್ತುತ್ಯಾರ್ಹವಾದುದು. ಈ ಮೂಲಕ ಸರ್ವಾಧ್ಯಕ್ಷ ಸ್ಥಾನಕ್ಕೆ ಒಬ್ಬ ಅರ್ಹ ವ್ಯಕ್ತಿಯನ್ನು ಆರಿಸಿದ ಸಮಾಧಾನ ಆಯ್ಕೆ ಸಮಿತಿಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ನಿರೂಪಿಸಿ, ಸ್ವಾಗತಿಸಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಪ.ಪಂ ಸದಸ್ಯರು, ನಿಂಗನಗೌಡ ಲಕ್ಕನಗೌಡ್ರ, ಮುಖ್ಯಾಧಿಕಾರಿ ಮಹೇಶ ನಿಡಶೇಷಿ, ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ವಿರೂಪಾಕ್ಷಗೌಡ ಹಿರೆಗೌಡ್ರ, ಕುಬೇರಪ್ಪ ನಾಶಿಪುಡಿ, ಎಸ್.ಕೆ. ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಸುನೀಲ ಬಸವರಡ್ಡೇರ, ಡಾ. ಕಲ್ಲಯ್ಯ ಹಿರೇಮಠ, ಶಿಕ್ಷಕ ಬಿ.ಟಿ. ತಾಳಿ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಡಾ. ಎಲ್.ಎಸ್. ಗೌರಿ, ಬಿ.ಎಸ್. ಉದ್ದಣ್ಣವರ, ವೀರಪ್ಪ ಜಿರ್ಲ, ಬಸನಗೌಡ ಹಿರೆವಡೆಯರ, ವಿರುಪಾಕ್ಷಗೌಡ ಹಿರೆವಡೆಯರ, ಎಂ.ಸಿ. ಹಿರೇವಡೆಯರ, ಮಹಾಂತಯ್ಯ ಗುರುವಡೆಯರ, ಪ್ರಮೋದ ಕಳಕಣ್ಣವರ, ಬಿ.ಕೆ. ಜಾಲೀಹಾಳ, ಅಲ್ಲಾಭಕ್ಷಿ ನದಾಫ್ ಮುಂತಾದವರಿದ್ದರು. ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ವಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ವಾಧ್ಯಕ್ಷ ಹಿರೇವಡೆಯರ, ನನ್ನ ಮೇಲಿನ ಅಭಿಮಾನ ಮತ್ತು ವಿಶ್ವಾಸದಿಂದ ನನ್ನನ್ನು ತಾಲೂಕಾ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದೀರಿ. ಈ ಸ್ಥಾನ ನನಗೆ ಸಿಕ್ಕಿರುವುದು ನಾನು ಗುರು ಶ್ರೀ ಅನ್ನದಾನೇಶ್ವರರ ಮೇಲಿಟ್ಟಿರುವ ಭಕ್ತಿ, ನನ್ನ ಕರ್ತವ್ಯ ನಿಷ್ಠೆಯಿಂದ. ಈ ಭಕ್ತಿ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ನೀವು ನನ್ನನ್ನು ಗಜೇಂದ್ರಗಡ ತಾಲೂಕಾ ಪ್ರಥಮ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಆಯ್ಕೆ ಮಾಡಿರುವದನ್ನು ತುಂಬು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದರು.