ಶಿವಮೊಗ್ಗ: ಗುಟ್ಟಾಗಿ ಮದುವೆಯಾಗಿದ್ದ ಪ್ರೇಯಸಿಯನ್ನು ಪ್ರಿಯಕರನೇ ಕೊಲೆ ಮಾಡಿ ಟ್ರಂಚ್ ನಲ್ಲಿ ಹೂತುಹಾಕಿದ ಘಟನೆ ಸಾಗರ ತಾಲೂಕಿನ ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಜನ್ ಕೊಲೆ ಮಾಡಿದ ಆರೋಪಿಯಾಗಿದ್ದು, ಸೌಮ್ಯ(24) ಕೊಲೆಯಾದ ಯುವತಿಯಾಗಿದ್ದಾಳೆ. ಕೊಪ್ಪದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಯುವಕ, ಯುವತಿ ಬೇರೆ ಬೇರೆ ಸಮುದಾಯದವರಾಗಿದ್ದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಇವರಿಬ್ಬರು ಗೌಪ್ಯವಾಗಿ ಮದುವೆಯಾಗಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಹೀಗಾಗಿ ಸೌಮ್ಯ ಪದೇ ಪದೇ ಸುಜನ್‌ಗೆ ಫೋನ್ ಮಾಡಿ ಮನೆಗೆ ಕರೆದುಕೊಂಡು ಹೋಗು ಎಂದು ಒತ್ತಾಯ ಮಾಡುತ್ತಿದ್ದಳು.
ಸುಜನ್ ಸೌಮ್ಯಳೊಂದಿಗೆ ಸಂಬಂಧ ಹೊಂದಿದ್ದರೂ, ಮದವೆಯಾಗಲು ಹಿಂದೇಟು ಹಾಕಿದ್ದನು.,ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ ಎಂದು ಸೌಮ್ಯಳ ಬಳಿ ಅಲವತ್ತುಕೊಂಡರೂ, ಸೌಮ್ಯ ರಾತ್ರೋ ರಾತ್ರಿ ಸುಜನ್ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಳು. ಸಾಗರದಿಂದ ಹೆದ್ದಾರಿಪುರಕ್ಕೆ ಬಂದು ಆತನ ಜೊತೆ ಮಾತನಾಡಿದ್ದಾಳೆ.
ಅಲ್ಲಿಯೂ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಯುವಕ ಹಲ್ಲೆ ಮಾಡಿದ್ದು ಯುವತಿ ಸಾವನ್ನಪ್ಪಿದ್ದಾಳೆ. ಆರೋಪಿಯ ವಿಚಾರಣೆಯಲ್ಲಿ ಯುವತಿಯನ್ನ ಕೊಂದಿದ್ದು ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ಆರೋಪಿ ಆನಂದಪುರದ ಮುಂಬಾಳು ಬಳಿ ಯುವತಿಯ ಶವವನ್ನು ಹೂತು ಹಾಕಿದ್ದಾನೆ. ಘಟನೆಯ ಸತ್ಯಾಸತ್ಯೆಯ ಬಗ್ಗೆ ಸುಜನ್ ಗೆ ತಾರಮೂರ್ತಿ ಪ್ರಶ್ನಿಸಿದಾಗ 21 ದಿನಗಳ ಕೊಲೆಯ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ.
ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ. ತಕ್ಷಣ ಅಲರ್ಟ್ ಆದ ತಾರಮೂರ್ತಿಯವರು ಸುಜನ್ ತಪ್ಪಿಸಿಕೊಳ್ಳದಂತೆ ತಮ್ಮ ಬಳಿಯೇ ಇರಿಸಿಕೊಂಡು ನಂತರ ಕೊಪ್ಪ ಪೊಲೀಸರಿಗೆ ಒಪ್ಪಿಸಿದ್ದಾರೆ.



