ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿದ ವ್ಯಕ್ತಿ: ಅಷ್ಟಕ್ಕೂ ಆಗಿದ್ದೇನು?

0
Spread the love

ಲಕ್ನೋ:- ವ್ಯಕ್ತಿಯೊಬ್ಬ ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Advertisement

ಮಕ್ಕಳನ್ನು ಮೆಹೆಕ್ (12), ಶಿಫಾ (5), ಅಮನ್ (3) ಮತ್ತು ಎಂಟು ತಿಂಗಳ ಶಿಶು ಇನೈಶಾ, ತಂದೆ ಸಲ್ಮಾನ್ ಮೃತರು. ಆತ್ಮಹತ್ಯೆಗೂ ಮೊದಲು ವೀಡಿಯೊ ರೆಕಾರ್ಡ್ ಮಾಡಿ ತನ್ನ ಸಹೋದರಿ ಗುಲಿಸ್ತಾಗೆ ಕಳುಹಿಸಿದ್ದಾನೆ. ಅದರಲ್ಲಿ ತನ್ನ ಪತ್ನಿ ಖುಷ್ನುಮಾ ಮತ್ತು ಆಕೆಯ ಪ್ರಿಯಕರನೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಸಲ್ಮಾನ್ ಮತ್ತು ಖುಷ್ನುಮಾ ಮದುವೆಯಾಗಿ 15 ವರ್ಷಗಳಾಗಿವೆ.ಆದರೆ ಇತ್ತೀಚಿನ ತಿಂಗಳುಗಳಲ್ಲಿ ಜಗಳಗಳು ಹೆಚ್ಚಾಗಿದ್ದವು.ಈ ಶುಕ್ರವಾರ ಮತ್ತೆ ಜಗಳ ನಡೆದಿತ್ತು, ಬಳಿಕ ಆಕೆ ತನ್ನ ಗೆಳೆಯನ ಜತೆ ಓಡಿ ಹೋಗಿದ್ದಳು. ಆ ದಿನ ನಂತರ, ಸಲ್ಮಾನ್ ತನ್ನ ನಾಲ್ವರು ಮಕ್ಕಳನ್ನು ಯಮುನಾ ಸೇತುವೆಗೆ ಕರೆದುಕೊಂಡು ಹೋಗಿ ನದಿಗೆ ಹಾರಿದ್ದಾರೆ. ಘಟನೆ ಸಂಬಂಧ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.


Spread the love

LEAVE A REPLY

Please enter your comment!
Please enter your name here