Crime News: ಮಕ್ಕಳ ಎದುರೇ ಹೆಂಡತಿ ಹಾಗೂ ಅಜ್ಜಿಯನ್ನ ಕೊಚ್ಚಿ ಕೊಂದ ವ್ಯಕ್ತಿ!

0
Spread the love

ರಾಯಚೂರು:- ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ಮಕ್ಕಳ ಎದುರೇ ಹೆಂಡತಿ ಹಾಗೂ ಅಜ್ಜಿಯನ್ನ ಕೊಚ್ಚಿ ಕೊಂದ ಘಟನೆ ಜರುಗಿದೆ.

Advertisement

ಆರೋಪಿ ದುರ್ಗಪ್ಪ ಮುದಗಲ್ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಿ ದರ್ಜೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕ್ವಾರ್ಟರ್ಸ್​ನಲ್ಲೇ ದುರ್ಗಪ್ಪ‌ ಕುಟುಂಬ ಸಮೇತ ಇದ್ದ. ಆದ್ರೆ, ಇಂದು ನಸುಕಿನ ಜಾವ ನಾಲ್ಕು ಗಂಟೆಗೆ ಪತ್ನಿ ಜ್ಯೋತಿ ಹಾಗೂ ಅಜ್ಜಿ ದ್ಯಾಮವ್ವ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇಂದು ನಸುಕಿನಲ್ಲಿ ಪತ್ನಿ ಜ್ಯೋತಿ ಹಾಗೂ ಅಜ್ಜಿ ದ್ಯಾಮವ್ವಳನ್ನ ಕೊಡಲಿಯಿಂದ ಕೊಚ್ಚಿ, ಕೊಡಲಿಯನ್ನ ತಾನೂ ಕೆಲಸ ಮಾಡ್ತಿದ್ದ ಆಸ್ಪತ್ರೆ ಮೂಲೆಯೊಂದರಲ್ಲಿಟ್ಟು ಎಸ್ಕೇಪ್ ಆಗಿದ್ದ. ಬಳಿಕ ಮುದಗಲ್ ಪೊಲೀಸರು ಶೋಧ ಕಾರ್ಯ ನಡೆಸಿ ಆಸ್ಪತ್ರೆ ಪಕ್ಕದ ಇಂದಿರಾ ಕ್ಯಾಂಟಿನ್​​ನಲ್ಲಿ ಅವಿತು ಕೂತಿದ್ದ ಆರೋಪಿ ದುರ್ಗಪ್ಪನನ್ನ ವಶಕ್ಕೆ ಪಡೆದಿದ್ದಾರೆ.


Spread the love

LEAVE A REPLY

Please enter your comment!
Please enter your name here