ಎಪ್ರಿಲ್ 10 ಭೂಮಾಪನ ಕ್ಷೇತ್ರದ ಮಹತ್ವದ ದಿನ. ಭೂಮಾಪನವು ಮಾನವ ನಾಗರಿಕತೆಯ ಪ್ರಗತಿಯಲ್ಲಿ ಅತ್ಯಗತ್ಯವಾದ ಕ್ಷೇತ್ರವಾಗಿದೆ. ಭೂಮಿಯ ಅಳತೆ, (ಗಡಿ) ಸೀಮಾರೇಖೆಗಳನ್ನು ನಿರ್ಧರಿಸುವುದು, ಭೂಮಿಯ ಭೌಗೋಳಿಕ ಮತ್ತು ಭೌತಿಕ ಲಕ್ಷಣಗಳನ್ನು ಅಧ್ಯಯನ ಮಾಡುವ ಕಾರ್ಯದಲ್ಲಿ ಭೂಮಾಪನ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕ್ಷೇತ್ರದ ಮಹತ್ವವನ್ನು ಗುರುತಿಸಿ, ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಭೂಮಾಪನದ ಪ್ರಮುಖ ಸಂಸ್ಥೆಯು 1767ರಲ್ಲಿ ಸ್ಥಾಪನೆಯಾಯಿತು. ಈ ಸಂಸ್ಥೆಯು ಭಾರತ ದೇಶದ ಭೌಗೋಳಿಕ ನಕ್ಷೆಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭೂಮಾಪನ ತಂತ್ರಜ್ಞಾನ, ಉಪಗ್ರಹ ಭೂಮಾಪನ, ಜಿಪಿಎಸ್, ಜಿಐಎಸ್ ಮತ್ತು ಲಿಡಾರ್ ಪದ್ಧತಿಗಳನ್ನು ಬಳಸಿಕೊಂಡು, ಈ ಕ್ಷೇತ್ರ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ.
ಭಾರತದ ಹಲವಾರು ಭೌಗೋಳಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು ಈ ದಿನವನ್ನು ವಿಶೇಷ ಉಪನ್ಯಾಸಗಳು, ಕಾರ್ಯಾಗಾರಗಳು, ಪ್ರದರ್ಶನಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಪರಿಚಯದ ಮೂಲಕ ಆಚರಿಸುತ್ತವೆ. ಭೂಮಾಪನ ಕ್ಷೇತ್ರದ ವಿದ್ವಾಂಸರು, ತಜ್ಞರು ಮತ್ತು ವಿದ್ಯಾರ್ಥಿಗಳು ಈ ದಿನದ ಮೂಲಕ ತಮ್ಮ ಸಾಧನೆಗಳನ್ನು ಹಂಚಿಕೊಳ್ಳುತ್ತಾರೆ.
ಡಿಜಿಟಲ್ ತಂತ್ರಜ್ಞಾನ, ಆರ್ಥೋಫೋಟೋಗ್ರಫಿ, ಡ್ರೋನ್ ಭೂಮಾಪನ, 3ಆ ಮಾದರಿಗಳನ್ನು ಬಳಸಿಕೊಂಡು ಭೂಮಾಪನ ಕ್ಷೇತ್ರ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಸೇರುವ ಸಾಧ್ಯತೆಗಳಿವೆ. ಜಮೀನಿನ ಮರುಗೋಳಿಕೆ ಮತ್ತು ಗಡಿ ನಿರ್ಧಾರ–ಭೂಮಿಯ ಗಡಿ ವಿವಾದಗಳನ್ನು ಪರಿಹರಿಸಲು ಮತ್ತು ಸರಿಯಾದ ಅಳತೆಗಳನ್ನು ಒದಗಿಸಲು ಭೂಮಾಪಕರು ಸಹಾಯ ಮಾಡುತ್ತಾರೆ.
ಭೂಹದ್ದಿನ ದಾಖಲೆ ಮತ್ತು ಮ್ಯಾಪಿಂಗ್–ನಕ್ಷೆಗಳನ್ನು ತಯಾರಿಸುವುದು, ಸರ್ವೇ ಸಂಖ್ಯೆಗಳನ್ನು ನವೀಕರಿಸುವುದು, ಗ್ರಾಮ ಮತ್ತು ನಗರ ಯೋಜನೆ–ಸ್ಮಾರ್ಟ್ ಸಿಟಿ ಯೋಜನೆ, ರಸ್ತೆ, ಇಮಾರತಿಗಳ ಸ್ಥಾಪನೆಗೆ ಅಗತ್ಯ ಭೂಮಾಪನ ಕಾರ್ಯ ನಿರ್ವಹಣೆ, ಮನೆಯ ಪ್ಲಾಟ್ ಅಳತೆ ಮತ್ತು ಮಂಜೂರು ಪ್ರಕ್ರಿಯೆ–ಬಿಳಿಯ ಹಣ್ಣು ಮತ್ತು ಕಡಿತ ನೀಲಿ ಹಣ್ಣು ದೃಢೀಕರಣ, ಕಾನೂನು ಮತ್ತು ಸರಕಾರಿ ಯೋಜನೆಗಳು–ಭೂಮಿ ಬದಲಾವಣೆ, ಕಡತ ಪ್ರಕ್ರಿಯೆಗಳಿಗೆ ಅಗತ್ಯವಾದ ಭೂಮಾಪನ ವರದಿ ನೀಡುವುದು ಭೂಮಾಪಕರ ಕಾರ್ಯವ್ಯಾಪ್ತಿಯಾಗಿದೆ.
ರಾಷ್ಟ್ರೀಯ ಭೂಮಾಪನ ದಿನವು ಭೂಮಾಪನ ತಂತ್ರಜ್ಞಾನ, ಅದರ ಪ್ರಗತಿ ಮತ್ತು ಮಹತ್ವವನ್ನು ಒತ್ತಿ ಹೇಳುವ ದಿನವಾಗಿದೆ. ಭೂಮಾಪನದ ಸಹಾಯದಿಂದ ದೇಶದ ಭೌಗೋಳಿಕ ನಿರ್ವಹಣೆ ಸುಗಮವಾಗುತ್ತಿದ್ದು, ಭವಿಷ್ಯದಲ್ಲಿ ಮತ್ತಷ್ಟು ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ನಾವು ಭೂಮಿಯನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಮಾತ್ರ, ನಮ್ಮ ಭವಿಷ್ಯವನ್ನು ಸುಧಾರಿಸಬಹುದು.
ಮೊದಲ ಬಾರಿಗೆ ರಾಷ್ಟçದಲ್ಲಿ ಕರ್ನಾಟಕ ಸರ್ಕಾರ, ಕಂದಾಯ ಸಚಿವ ವಿ.ಸೋಮಶೇಖರ್ ನೇತೃತ್ವದಲ್ಲಿ ಹಾಗೂ ಆಗಿನ ಭೂ-ಮಾಪನ ಇಲಾಖೆಯ ಆಯುಕ್ತರಾದ ರಾಜೀವ್ ಚಾವ್ಹ್ಲಾ ಸಹಕಾರದಿಂದಿಗೆ 2000ನೇ ಇಸ್ವಿಯಲ್ಲಿ ಪರವಾನಿಗೆ ಭೂಮಾಪಕರ ಆಯ್ಕೆ ಶುರು ಮಾಡಲಾಯಿತು. ಅದರ ಮುಂಚೆ ಕುಂಠಿತಗೊಂಡಿದ್ದ ಭೂ-ಮಾಪನ ಕಾರ್ಯಕ್ಕೆ ಪರವಾನಿಗೆ ಭೂ-ಮಾಪಕರು ಈಗಿನ ವೇಗಗತಿಗೆ ಕಾರಣರಾಗಿದ್ದಾರೆ. ವರ್ಷಾನುಗಟ್ಟಲೆ ಕಾಯಬೇಕಿದ್ದ ರೈತರು ಈಗ ಒಂದು ತಿಂಗಳಲ್ಲಿಯೇ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗಿದ್ದಾರೆ. ಇಂತಹ ಪರವಾನಿಗೆ ಭೂ-ಮಾಪಕರ ಕುಂದು ಕೊರತೆಗಳಿಗೆ ಈಗಿನ ಸರಕಾರ ಮಹತ್ತರದ ನಿರ್ಧಾರದ ಮೂಲಕ ನೆರವಾಗಲೆಂದು ನಾವೆಲ್ಲರು ಆಶಿಸೋಣ.
– ಎಂ.ಎಂ. ಮಾಳಗಿಮನಿ.
ಭೂಮಾಪಕರು, ಗದಗ.
ಭೂಮಾಪನದ ಮಹತ್ವ :
- ಆಸ್ತಿಯ ನಿರ್ಧಾರ – ಭೂಮಿ ಸ್ವಾಮ್ಯ ನಿರ್ಧಾರ, ಮರುಹಂಚಿಕೆ ಮತ್ತು ಸೀಮಾರೇಖೆಗಳನ್ನು ಗುರುತಿಸಲು ಭೂಮಾಪನ ಮುಖ್ಯವಾಗಿದೆ.
- ಪರಿವೇಶ ನಿರ್ವಹಣೆ – ಪರಿಸರ ಸಂರಕ್ಷಣೆ, ನದಿ ಕೋಸಗಳು, ಕಾಡು ಸಂರಕ್ಷಣೆ ಮುಂತಾದ ಕಾರ್ಯಗಳಲ್ಲಿ ನೆರವು ನೀಡುತ್ತದೆ.
- ಅಧುನಿಕ ನಗರ ಯೋಜನೆ – ರಸ್ತೆಗಳು, ಸೇತುವೆಗಳು, ಕಟ್ಟಡಗಳು, ರೈಲು ಮಾರ್ಗಗಳು ಮುಂತಾದ ಮೂಲಸೌಕರ್ಯ ಯೋಜನೆಗೆ ನೆರವಾಗುತ್ತದೆ.
- ರಕ್ಷಣಾ ಮತ್ತು ಭದ್ರತಾ ವಲಯ – ಸೇನಾ ತಂತ್ರಜ್ಞಾನ, ಭೂಗೋಳೀಯ ಗಡಿಗಳು ನಿರ್ಧರಿಸಲು ಮತ್ತು ಭದ್ರತಾ ಉದ್ದೇಶಗಳಿಗೆ ಸಹಾಯಕವಾಗಿದೆ.