ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಮಕ್ಕಳಿಗೆ ಸಿಹಿಯೂಟ ಮಾಡಿಸುವುದು ಸುಲಭದ ಕೆಲಸವೇನಲ್ಲ. ಹಾಗೆಂದು ಸುಮ್ಮನಾಗದೆ ದಾನಿಗಳನ್ನು ಹುಡುಕಿ ಪ್ರತಿ ವರ್ಷವೂ ಮಕ್ಕಳಿಗೆ ಅಮೃತ ಭೋಜನ ಮಾಡಿಸುತ್ತಿರುವುದು ಪುಣ್ಯದ ಕೆಲಸ ಎಂದು ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್ ಸಂಸ್ಥಾಪಕ ಕಾರ್ಯದರ್ಶಿ ಉಮೇಶ ಪಾಟೀಲ ಹೇಳಿದರು.
ಪಟ್ಟಣದ ಕೆಜಿಎಂಎಸ್ ಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಸಿಹಿ ಊಟವನ್ನು ಬಡಿಸಿ ಮಾತನಾಡಿದರು.
ಕಳೆದ ನಾಲ್ಕೈದು ವರ್ಷಗಳಿಂದ ಈ ಕಾರ್ಯವನ್ನು ಇಲ್ಲಿಯ ಶಿಕ್ಷಕ ಬಳಗ ಮಾಡುತ್ತ ಬಂದಿರುವುದನ್ನು ತಿಳಿದು ಅತೀವ ಸಂತಸವಾಯಿತು. ಇಲ್ಲಿನ ಶಿಕ್ಷಕರ ಪರಿಶ್ರಮ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿರುವುದನ್ನು ಕಂಡು ಹೆಮ್ಮೆಯೆನಿಸಿತು. ಈ ಸೇವೆ ಪ್ರತಿ ವರ್ಷವೂ ಹೀಗೆಯೇ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಮುಖ್ಯ ಶಿಕ್ಷಕ ಬಿ.ಬಿ. ಕುರಿ ಉಮೇಶ ಪಾಟೀಲ ಮತ್ತು ಪರಿವಾರವನ್ನು ಸ್ವಾಗತಿಸಿ, ಶಾಲೆಯ ಎಲ್ಲ ಪ್ರಗತಿಯ ಹಂತಗಳನ್ನು ತೋರಿಸಿದರು. ಉಮೇಶ ಪಾಟೀಲರೊಂದಿಗೆ ರಮೇಶ ಕೋಲಕಾರ, ಬಸವರಾಜ ಜುಚನಿ, ಮಹೇಶ ಶಿವಶಿಂಪ್ರ, ಇಸ್ಮಾಯಿಲ್ ಮುದಗಲ್ಲ ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.