ಮಂಗಳೂರು: ಟಿಪ್ಪು ಸುಲ್ತಾನ್ ಧ್ವಂಸಗೊಳಿಸಿದ್ದಾನೆ ಎನ್ನಲಾದ ಶ್ರೀ ಭಗವದ್ ಗೋಪಾಲಕೃಷ್ಣ ದೇಗುಲ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ಅದು ಕೂಡ ಶ್ರೀಕೃಷ್ಣನೇ ಹಿಂದೂ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು ದೇಗುಲ ಇರುವ ಬಗ್ಗೆ ಸುಳಿವು ನೀಡಿದ್ದು, ಜಾಗದಲ್ಲಿ ಶೋಧನೆ ಮಾಡಿದಾಗ ದೇಗುಲದ ಅವಶೇಷಗಳು ಹಾಗೂ ಗೋಪಾಲಕೃಷ್ಣ ಮೂರ್ತಿ ಇರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಪತ್ತೆಯಾಗಿದೆ. ಸಾಕ್ಷಾತ್ ವಿಷ್ಣುವೇ ಕನಸಿನಲ್ಲಿ ಬಂದು ಇರುವಿಕೆ ತೋರಿದ ರೋಚಕ ಸ್ಟೋರಿಯಾಗಿದೆ.
ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಸರ್ಕಾರಿ ಜಾಗದಲ್ಲಿ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿವೆ. ಪ್ರಶ್ನಾ ಚಿಂತನೆ ಹಿನ್ನೆಲೆಯಲ್ಲಿ ಉತ್ಖನನದ ವೇಳೆ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ತೆಕ್ಕಾರು ಗ್ರಾಮದ ಜನರನ್ನು ಅಚ್ಚರಿಗೆ ತಳ್ಳಿದ ದೇವರ ಪವಾಡ. ನೂರಾರು ವರ್ಷಗಳ ಹಿಂದೆಯೇ ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾಗಿದೆ ಎನ್ನಲಾದ ಗೋಪಾಲಕೃಷ್ಣ ದೇವಸ್ಥಾನ ಈಗ ಪತ್ತೆಯಾಗಿದೆ.
ಟಿಪ್ಪು ಸುಲ್ತಾಲ್ ದಂಡಯಾತ್ರೆ ಬಂದಿದ್ದ ತೆಕ್ಕಾರು ಪ್ರದೇಶದಲ್ಲಿ ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರೋ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿದೆ. ಅಲ್ಲದೇ ಕೆಲ ಹಿರಿಯರ ಮಾಹಿತಿಯಂತೆ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನವಿದ್ದ ಮಾಹಿತಿಯಿದೆ. ಹೀಗಾಗಿ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಮಾಡಿಕೊಂಡು ದೇವಸ್ಥಾನ ಶೋಧ ಆರಂಭಿಸಿದ್ದ ಗ್ರಾಮಸ್ಥರು. ಆದರೆ, ನಿಖರ ಜಾಗದ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರು ಸುಮ್ಮನಾಗಿದ್ದರು.