ತಾಯಿ-ಮಗುವಿನ ಸಂಬಂಧ ವಿಶಿಷ್ಟವಾದುದು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದೇವರು ತಾನು ಎಲ್ಲೆಡೆ, ಎಲ್ಲರ ಬಳಿ ಇರಲು ಸಾಧ್ಯವಿಲ್ಲ ಎಂದೇ ತಾಯಿಯನ್ನು ಸೃಷ್ಟಿಸಿದ್ದಾನೆ. ತಾಯಿ ಈ ಜಗದ ಕಣ್ಣಾಗಿದ್ದಾಳೆ ಎಂದು ಬಿ.ಕೆ. ಸವಿತಕ್ಕ ಹೇಳಿದರು.

Advertisement

ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಾಯಿ ಒಂದು ಮಗುವನ್ನು ಹೊತ್ತು, ಹೆತ್ತು, ಸಾಕಿ, ಸಲುಹಿ ಈ ಜಗತ್ತಿಗೆ ನೀಡುತ್ತಾಳೆ. ಶಾಲೆಗೆ ಹೋಗುವ ಮುಂಚೆ ಅದಕ್ಕೆ ಬೇಕಾದ ಎಲ್ಲ ಸಂಸ್ಕಾರವನ್ನು ಆಕೆಯೇ ನೀಡುತ್ತಾಳೆ. ತಾಯಿ-ಮಗುವಿನ ಸಂಬಂಧ ಅನ್ಯೋನ್ಯವಾಗಿದ್ದು, ಮಗು ದೊಡ್ಡದಾಗಿ ಬೆಳೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಅದನ್ನು ಕಂಡು ಸಂತೋಷಿಸುತ್ತಾಳೆ. ಮಗುವಿಗೆ ತಾಯಿಯೇ ಸರ್ವಸ್ವ. ಆದ್ದರಿಂದ ತಾಯಿಗೆ ಈ ಜಗತ್ತಿನಲ್ಲಿ ವಿಶೇಷವಾದ ಸ್ಥಾನವಿದೆ ಎಂದರು.

ತಾಯಂದಿರ ದಿನಾಚರಣೆಯ ದಿನ ಮಾತ್ರ ತಾಯಂದಿರನ್ನು ಹೊಗಳಿ ಪೂಜಿಸಿದರೆ ಸಾಲದು. ನಿತ್ಯವೂ ಆಕೆಯ ಪೂಜೆಯನ್ನು ಮಾಡಬೇಕು. ಇಂದಿನ ದಿನಗಳಲ್ಲಿ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಂದೆ-ತಾಯಿಗಳನ್ನು ಅಸಡ್ಡೆ ಮಾಡುವದನ್ನು ಕಾಣುತ್ತೇವೆ. ಅವರನ್ನು ಸಾಕಲಾಗದೆ ಅವರನ್ನು ಅನಾಥಾಶ್ರಮಗಳಿಗೆ ಕಳಿಸುವುದನ್ನು ನೋಡುತ್ತೇವೆ. ತಾಯಂದಿರ ಆಚರಣೆಯ ದಿನ ನಾವೆಲ್ಲರೂ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂಬ ಶಪಥ ಮಾಡಬೇಕೆಂದು ಬಿ.ಕೆ. ಸವಿತಕ್ಕ ಹೇಳಿದರು.

ತಾಯಂದಿರ ದಿನಾಚರಣೆಯ ಮಹತ್ವ ಕುರಿತು ಅನೇಕ ತಾಯಂದಿರು ಮಾತನಾಡಿದರು.


Spread the love

LEAVE A REPLY

Please enter your comment!
Please enter your name here