ರಾಯಚೂರು:- ಜಿಲ್ಲೆಯ ಮಲಿಯಾಬಾದ್ ಗ್ರಾಮದಲ್ಲಿ ದುರಂತ ಒಂದು ಸಂಭವಿಸಿದೆ. ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯು ಸಹ ಜಲಸಮಾಧಿಯಾಗಿದ್ದಾರೆ.
Advertisement
32 ವರ್ಷದ ರಾಧಮ್ಮ, ಹಾಗೂ 5 ವರ್ಷದ ಕೆ.ಸಂಜು ಮೃತರು. ರಾಧಮ್ಮ ಇಂದು ತನ್ನ ಪುತ್ರನನ್ನು ಕರೆದುಕೊಂಡು ಸಂಜು ಬಟ್ಟೆ ತೊಳೆಯಲೆಂದು ಕೆರೆ ಹೋಗಿದ್ದಾಳೆ. ಆ ವೇಳೆ ಸಂಜು ಕಾಲು ಜಾರಿ ಕರೆಯೊಳಗೆ ಬಿದ್ದಿದ್ದಾನೆ.
ಕೂಡಲೇ ತಾಯಿ ರಾಧಮ್ಮ ಸಹ ಸಂಜುನನ್ನು ಕಾಪಾಡಲು ಹೋಗಿ ಜಲಸಮಾಧಿಯಾಗಿದ್ದಾಳೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.