ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಬ್ಯಾನರ್‌ನ ಪ್ರಪ್ರಥಮ ಕಾಣಿಕೆಯಾಗಿ `ಕರಾಸ್ತ್ರ’ ಕನ್ನಡ ಚಲನಚಿತ್ರ ಜೂನ್ 13ರಂದು ಬಿಡುಗಡೆಗೆಯಾಗಲಿದೆ ಎಂದು ನಿರ್ದೇಶಕ, ನಟ ನಾರಾಯಣ ಪೂಜಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಕಲಾವಿದರನ್ನು ಸೇರಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ದ್ವಾಪರ ಯುಗದಲ್ಲಿನ ಸಮಸ್ಯೆಗೆ ಕಲಿಯುಗದಲ್ಲಿ ಪರಿಹಾರ ಹುಡುಕಲು ಬಂದ ನಾಯಕಿ ಸಮಸ್ಯೆ ಬಗೆಹರಿಸುತ್ತಾಳೆಯೋ ಇಲ್ಲವೋ ಎಂಬ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಸಿನಿಮಾ ಕೌಟುಂಬಿಕ, ಭಾವನಾತ್ಮಕ ಹಾಗೂ ಸಾಹಸಮಯವಾಗಿದ್ದು, ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದರ‍್ಜನ್ಯಗಳ ಬಗ್ಗೆ ಬೆಳಕು ಚೆಲ್ಲುವ ಈ ಚಲನಚಿತ್ರವನ್ನು ಎಲ್ಲ ವಯೋಮಾನದವರು ಕುಳಿತು ನೋಡುವಂತಿದೆ ಎಂದರು.
ಮುಖ್ಯ ಪಾತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಇದ್ದಾರೆ. ಕತೆ, ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದು. ಸಹಾಯಕ ನಿರ್ದೇಶಕರಾಗಿ ಪವನ್ ಕುಲಕರ್ಣಿ, ಸತೀಶ ಕ್ಯಾತಘಟ್ಟ, ಕಣಿವೆಪ್ಪ ಬಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣವನ್ನು ಶರಣು ಸುಗ್ನಳ್ಳಿ, ಲಕ್ಷ್ಮಣ, ಮೈಲಾರಿ ಗಗನ, ಸ್ಥಿರಚಿತ್ರಣ ವಿನ್ಸೆಂಟ್ ಪರೇರಾ, ಸಂಕಲನ ಶರಣು ಸುಗ್ನಳ್ಳಿ, ಅವೀತ ಬಳ್ಳಾರಿ, ಸಂಗೀತ ಮಹಾರಾಜ್, ಹಿನ್ನೆಲೆ ಸಂಗೀತ ರಾಜ್ ಭಾಸ್ಕರ್, ಸಾಹಸ ಕರಾಟೆ ಮಂಜು, ಶಂಕರ ಶಾಸ್ತ್ರಿ, ನೃತ್ಯ ವಿನಾಯಕ, ಕಲಾ ನಿರ್ದೇಶಕ ಶಾಂತಯ್ಯ ಪರಡಿಮಠ, ವಸ್ತ್ರಾಲಂಕಾರ ಹಾಗೂ ಪ್ರಸಾಧನವನ್ನು ಬಿ.ಎಚ್. ನಯನಾ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ಅವರದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟರಾದ ಮನೀಷಾ ಕಬ್ಬೂರು, ವಿನೋದ್ ಭಾಂಡೆಗೆ, ವಾಣಿ, ವಸಂತ ಕಡತಿ ಹಾಗೂ ಡಾ. ಪ್ರಭು ಗಂಜಿಹಾಳ ಪಾಲ್ಗೊಂಡಿದ್ದರು.
ಮುಖ್ಯ ಪಾತ್ರದಲ್ಲಿ ನಾರಾಯಣ ಪೂಜಾರ, ಶ್ರೀನಿವಾಸ್ ಹುಲ್ಕೋಟಿ, ಕ್ಷಿತಿ ವೀರಣ್ಣ, ಮನೀಷಾ ಕಬ್ಬೂರ, ಬೇಬಿ ಕೃಷ್ಣವೇಣಿ, ಬೇಬಿ ಸಾಕ್ಷಿ, ಕರ‍್ತಿಕ ಪೂಜಾರ, ಹನುಮಂತ, ಮಾಲತೇಶ ಸುಂಕದ, ಅಬ್ದುಲ್ ಮುನ್ನಾ ಎರೇಸೀಮೆ, ಬಸವರಾಜ ಹೊಂಬಾಳಿ, ಭುವನಾ, ವಿದ್ಯಾ ಬೆಳಗಾಂವ, ಹೀತೇಶ, ವಿಜಯಕುಮಾರ ನಾಗರತ್ನ ಮೊದಲಾದ ಕಲಾವಿದರು ನಟಿಸಿದ್ದಾರೆ ಎಂದು ನಾರಾಯಣ ಪೂಜಾರ ತಿಳಿಸಿದರು.