ನೀರಿನ ಬವಣೆ ನೀಗಿಸಲು ಮುಂದಾಗಿ

0
municipality meeting
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಬಹುದಿನಗಳಿಂದ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಈ ಬಾರಿಯ ಪುರಸಭೆ ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಪುರಸಭೆಯ ಸದಸ್ಯರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಬಜೆಟ್ ಸಿದ್ಧತೆ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಹುತೇಕ ಸದಸ್ಯರು ನೀರಿನ ಬವಣೆಯ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿ, ಬಜೆಟ್‌ನಲ್ಲಿ ನೀರಿನ ಸೌಲಭ್ಯಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಸೂಚಿಸಿದರು. ಪಟ್ಟಣದಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿನ ಸಂಕಷ್ಟ ಎದುರಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವುದಕ್ಕೆ ಮುಂದಾಗಬೇಕು. ಇದಕ್ಕೆ ಬಜೆಟ್‌ನಲ್ಲಿ ಸೂಕ್ತ ಅನುದಾನ ತೆಗೆದಿರಿಸಬೇಕು ಎಂದು ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಅಶ್ವಿನಿ ಅಂಕಲಕೋಟಿ, ಎಸ್.ಕೆ. ಹವಾಲ್ದಾರ, ಪೂಜಾ ಖರಾಟೆ ಅಭಿಪ್ರಾಯ ಮಂಡಿಸಿದರು.

ಸಾರ್ವಜನಿಕರ ಪರವಾಗಿ ರೈತ ಮುಖಂಡ ಟಾಕಪ್ಪ ಸಾತಪೂತೆ ಮಾತನಾಡಿ, ಬಜೆಟ್‌ನಲ್ಲಿ ಮೂಲ ಸೌಲಭ್ಯಗಳಾದ ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರಿಗೆ ಆದ್ಯತೆ ನೀಡುವ ಕಾರ್ಯವಾಗಲಿ. ಬಜೆಟ್‌ನ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಕೆಲ ಬಡಾವಣೆಗಳನ್ನು ಪುರಸಭೆಯ ಅಧೀನಕ್ಕೆ ತೆಗೆದುಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಬಜೆಟ್‌ನಲ್ಲಿ ಸದಸ್ಯರು ಮತ್ತು ಸಾರ್ವಜನಿಕರು ಸೂಚಿಸಿದ ಅವಶ್ಯಕ ಅಂಶಗಳನ್ನು ಸೇರಿಸಲಾಗುವುದು. ನೀರು, ರಸ್ತೆ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯರಾದ ವಾಣಿ ಹತ್ತಿ, ಜಯಕ್ಕ ಅಂದಲಗಿ, ಯಲ್ಲವ್ವ ದುರ್ಗಣ್ಣವರ, ಮುಸ್ತಾಕ ಶಿರಹಟ್ಟಿ, ನೀಲಮ್ಮ ಮೆಣಸಿನಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಪಿರ್ಧೋಶ ಆಡೂರ, ಮಂಜವ್ವ ನಂದೆಣ್ಣವರ, ಎಂ.ಎA. ಗದಗ, ಪೈಮ್ ಪಲ್ಲಿ ಮುಂತಾದವರಿದ್ದರು. ಮಹೇಶ ಹೊಸಮನಿ ನಿರೂಪಿಸಿದರು.

ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ, ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವದರ ಜತೆಗೆ ರಾಕ್ ಗಾರ್ಡನ್ ಮಾದರಿಯಲ್ಲಿ ಆದಾಯ ಪೂರಕವಾಗುವ ಗಾರ್ಡನ್ ನಿರ್ಮಿಸುವ ಯೋಜನೆ ಪುರಸಭೆಗಿರುವದರಾಗಿ ಹೇಳಿದರು. ನೀರಿನ ಕುರಿತು ಸದಸ್ಯರ, ಸಾರ್ವಜನಿಕರ ಹೇಳಿಕೆಗಳಿಗೆ ಕಿರಿಯ ಇಂಜಿನಿಯರ್ ಜಗದೀಶ ಉಳ್ಳಟ್ಟಿ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಗಳಿಂದ ಈ ಕುರಿತಂತೆ ಆದೇಶವಿದ್ದು ಅಗತ್ಯ ಕ್ರಮ ಕೈಗೊಳ್ಳುವದಾಗಿ ಹೇಳಿದರು.


Spread the love

LEAVE A REPLY

Please enter your comment!
Please enter your name here