ಅತ್ಹರ್ ಆಲಿ ಮನೆಯಲ್ಲಿ ಹಣ ಚಿನ್ನ ಪತ್ತೆ..! ಚಿನ್ನದ ಬ್ಯಾಗ್‌ ಪಕ್ಕದ ಮನೆಗೆ ಎಸೆದಿದ್ದ ಅಧಿಕಾರಿ ಲಾಕ್!

0
Spread the love

ಬೆಂಗಳೂರು: ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅತ್ಹರ್ ಆಲಿ ಎಂಬುವರ ನಿವಾಸ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಜಾನೆ 5:30 ರ ಹೊತ್ತಿಗೆ ಕಲ್ಯಾಣ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.

Advertisement

ಪರಿಶೀಲನೆ ವೇಳೆ ಅತ್ಹರ್ ಆಲಿ ಮನೆಯಲ್ಲಿ ಹಣ, ಚಿನ್ನ ಪತ್ತೆಯಾಗಿದೆ. ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಅತ್ಹರ್ ಆಲಿ ಅವರು ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದರು. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಇವರ ಮೊದಲ ಅಂತಸ್ತು ಇತ್ತು.

ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ತುಂಬಿ ಚಿನ್ನ ಎಸೆದಿದ್ದರು. ಬ್ಯಾಗ್ ಎಸೆದಿದ್ದನ್ನ ನೋಡಿ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನ ಕರೆದಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದಿದ್ದಾರೆ.


Spread the love

LEAVE A REPLY

Please enter your comment!
Please enter your name here