ಗದಗ:-ಬಿಡಾಡಿ ದನ ಗುದ್ದಿ ಪಾದಚಾರಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಟಗೇರಿ ನಗರದ ಹೊಸ ಬನಶಂಕರಿ ದೇವಸ್ಥಾನದ ಬಳಿ ಜರುಗಿದೆ.
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 70 ವರ್ಷದ ಶಂಕ್ರಪ್ಪ ಹೋಳಿ ಹೋರಿ ತಿವಿತದಿಂದ ಮೃತಪಟ್ಟ ವೃದ್ಧ ಎಂದು ತಿಳಿದು ಬಂದಿದೆ. ಸಂಬಂಧಿಕರ ಮನೆಗೆ ಬಂದಿದ್ದ ಶಂಕ್ರಪ್ಪ, ಹೋರಿ ತಿವಿತಕ್ಕೆ ಬಲಿಯಾಗಿದ್ದಾನೆ.

ಇನ್ನೂ ಬಿಡಾಡಿ ದನ ನಿಯಂತ್ರಣ ಮಾಡದ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳದಲ್ಲೇ ಕೂತು ಕೆಲ ಕಾಲ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ನಗರಸಭೆ ಅಧಿಕಾರಿಗಳ, ಪೊಲೀಸರ ಜೊತೆ ಸ್ಥಳೀಯರ ಕೆಲಕಾಲ ವಾಗ್ವಾದ ನಡೆಸಿದರು.
ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.



