ಬೆಂಗಳೂರು: ಭಾರತದಲ್ಲಿ ನುಡಿದಂತೆ ನಡೆದ ಸರ್ಕಾರ ಅಂದ್ರೆ ಸಿದ್ದರಾಮಯ್ಯ ಸರ್ಕಾರ ಮಾತ್ರ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೋದಿ ವರ್ಚಸ್ಸು ಕಡಿಮೆ ಆಗುತ್ತಿದೆ. ಬಿಜೆಪಿ ಸ್ಥಾನ ಕಡಿಮೆ ಆಗುತ್ತಿದೆ. ಅದಕ್ಕೆ ಗ್ಯಾರಂಟಿ ಕೊಡ್ತಿದ್ದಾರೆ.
ಭಾರತದಲ್ಲಿ ನುಡಿದಂತೆ ನಡೆದಿದ್ದು, ಯಾರಾದ್ರು ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ಭ್ರಷ್ಟಾಚಾರ ಇಲ್ಲದೆ ಜನರಿಗೆ ಹಣ ಹಾಕ್ತಿದ್ದೇವೆ. ಬಿಜೆಪಿ ಕೊಟ್ಟಿದ್ದನ್ನ ಬೇಡ ಎನ್ನುವುದಿಲ್ಲ. ಮೊದಲು ಗುಜರಾತ್ ಮಾದರಿ ಎಂದು ಹೇಳ್ತಿದ್ದರು. ಈಗ ಕರ್ನಾಟಕ ಗ್ಯಾರಂಟಿ ಮಾದರಿಯಾಗಿದೆ ಎಂದು ತಿಳಿಸಿದರು.
ಈವರೆಗೂ ಯಾವುದೇ ಗ್ಯಾರಂಟಿ ನಿಂತಿಲ್ಲ. ಮುಂದೆಯೂ ನಿಲ್ಲೊಲ್ಲ. ಭಾರತ ಇಷ್ಟು ಬೆಳೆಯೋಕೆ ಮೋದಿ ಕಾರಣ ಅಲ್ಲ. ಮನಮೋಹನ್ ಸಿಂಗ್ ಕಾರಣ. ಬಿಜೆಪಿ ಕೊಟ್ಟಿದ್ದು ಹರಕು ಸೀರೆ, ಮುರುಕಲು ಸೈಕಲ್ ಅಷ್ಟೆ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡೋ ಬಗ್ಗೆ ಯಾವುದೇ ಚಿಂತನೆ ಇಲ್ಲ.
ಕಾರ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಆಗಬಹುದು. ಆದರೆ ಸದ್ಯಕ್ಕೆ ಪರಿಷ್ಕರಣೆ ಬಗ್ಗೆ ಚಿಂತನೆ ಇಲ್ಲ. ಎರಡೂವರೆ ವರ್ಷ ಯೋಜನೆ ಕೊಟ್ಟಿದ್ದೇವೆ. ಮುಂದೆಯೂ ಕೊಡ್ತೀವಿ. ಗ್ಯಾರಂಟಿಯಿಂದ ಬಡ ಕುಟುಂಬಗಳಿಗೆ ಅನುಕೂಲ ಆಗಿದೆ. 5 ವರ್ಷವೂ ಗ್ಯಾರಂಟಿ ಇರಲಿದೆ ಎಂದು ಸ್ಪಷ್ಟಪಡಿಸಿದರು.