ರಾಜ್ಯಪಾಲರು ಸಹಿ ಹಾಕಿದರೆ ಇವತ್ತು ಸುಗ್ರೀವಾಜ್ಞೆ ಜಾರಿಯಾಗಬಹುದು: ಸಚಿವ ಜಿ.ಪರಮೇಶ್ವರ್

0
Spread the love

ಬೆಂಗಳೂರು: ರಾಜ್ಯಪಾಲರು ಸಹಿ ಹಾಕಿದರೆ ಇವತ್ತು ಸುಗ್ರೀವಾಜ್ಞೆ ಜಾರಿಯಾಗಬಹುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವ ಬಗ್ಗೆ ಮಾತನಾಡಿದ ಅವರು,  ರಾಜ್ಯಪಾಲರಿಗೆ ಈಗಾಗಲೇ ಕರಡು ಕಳಿಸಲಾಗಿದೆ.

Advertisement

ಇವತ್ತು ಸಹಿ ಹಾಕಬಹುದು ಎಂಬ ನಿರೀಕ್ಷೆ ಇದೆ. ರಾಜ್ಯಪಾಲರು ಅವರ ಕಾನೂನು ತಜ್ಞರ ಜೊತೆ ಮಾತನಾಡಿ ಅಂತಿಮವಾಗಿ ಸಹಿ ಹಾಕಬಹುದು. ಅವರು ಸಹಿ ಹಾಕಿದರೆ ಇವತ್ತು ಸುಗ್ರೀವಾಜ್ಞೆ ಜಾರಿಯಾಗಬಹುದು ಎಂದರು.

ಬಿಲ್ನಲ್ಲಿ ಕೆಲ ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಒಂದು ವೇಳೆ ರಾಜ್ಯಪಾಲರು ಕೆಲ ಅಂಶಗಳ ಬದಲಾವಣೆಗೆ ಸೂಚನೆ ಕೊಟ್ಟರೆ ಅದನ್ನು ಬದಲಾವಣೆ ಮಾಡಿ ಕಳುಹಿಸುತ್ತೇವೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here