ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ: ನಟ ವಿಕ್ರಾಂತ್ ಮಾಸಿ

0
Spread the love

ನಿನ್ನೆ ಅಹಮದಾಬಾದ್‌ ನಲ್ಲಿ ನಡೆದ ಏರ್ ಇಂಡಿಯಾ ದುರಂತದಲ್ಲಿ ಹಲವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಮಾನದ ಕೋ-ಪೈಲೆಟ್ ಆಗಿದ್ದ ಮಂಗಳೂರು ಮೂಲದ ಕ್ಲೈವ್ ಕುಂದರ್ ಕೂಡ ಕೊನೆಯುಸಿರೆಳೆದಿದ್ದಾರೆ. ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದ ‘12th ಫೇಲ್’ ಚಿತ್ರದ ನಟ ವಿಕ್ರಾಂತ್‌ ಮಾಸಿ ಮೃತ ಕ್ಲೈವ್‌ ಕುಂದರ್‌ ತಮ್ಮ ಸಂಬಂಧಿ ಎಂದು ಹೇಳಿಕೊಂಡಿದ್ದರು. ಇದೀಗ ಉಲ್ಟ ಹೊಡೆದಿರುವ ವಿಕ್ರಾಂತ್‌ ಮೃತಪಟ್ಟ ಪೈಲಟ್‌ ನನ್ನ ಸಂಬಂಧಿ ಅಲ್ಲ ಎಂದಿದ್ದಾರೆ.

Advertisement

ಮಾಧ್ಯಮದವರೇ ತಪ್ಪಾಗಿ ಭಾವಿಸಿದ್ದಾರೆ ಎಂದು ವಿಕ್ರಾಂತ್‌ ಮಾಸಿ ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿರುವ ವಿಕ್ರಾಂತ್‌, ‘ಕ್ಲೈವ್ ಕುಂದರ್ ಅವರು ನನ್ನ ಸಹೋದರ ಸಂಬಂಧಿ ಅಲ್ಲ. ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಅಷ್ಟೇ. ಈ ವಿಚಾರದಲ್ಲಿ ಹೆಚ್ಚಿನ ಊಹೆ ಬೇಡ. ಅವರ ಕುಟುಂಬ ನೆಮ್ಮದಿಯಿಂದ ಇರಲಿ’ ಎಂದಿದ್ದಾರೆ.

ನಿನ್ನೆ ಏರ್ ಇಂಡಿಯಾ ವಿಮಾನ ಅಹಮದಾಬಾದ್​ನಿಂದ ಲಂಡನ್​ಗೆ ಹೊರಟಿತ್ತು. ಈ ವಿಮಾನದಲ್ಲಿ 242 ಪ್ರಯಾಣಿಕರು ಇದ್ದರು. ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಹಾಸ್ಟೆಲ್‌ ಗೆ ಅಪ್ಪಳಿಸಿದ್ದರು ವಿಮಾನದಲ್ಲಿದ್ದ 241 ಜನ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಓರ್ವ ಮಾತ್ರ ಪವಾಡ ಸದೃಶ ರೀತಿಯಲ್ಲಿ ಪರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here