ಗದಗ :- ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಗಸ್ತು ವಾಹನ ಕಂದಕಕ್ಕೆ ಉರುಳಿ ಬಿದ್ದ ಘಟನೆ ಗದಗ ತಾಲೂಕಿನ ದುಂದೂರು ಕ್ರಾಸ್ ಬಳಿ ಜರುಗಿದೆ.
Advertisement
ವಿಜಯನಗರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಜರುಗಿದ್ದು, ಘಟನೆಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಲ್ಲದೇ ಕ್ರೇನ್ ಮೂಲಕ ಹೆದ್ದಾರಿ ಗಸ್ತು ವಾಹನವನ್ನು ಸಿಬ್ಬಂದಿ ಹೊರಗೆ ತಗೆದಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.