ಹುಬ್ಬಳ್ಳಿ : ಬಡವರು ಎರಡು ಹೊತ್ತು ಊಟ ಮಾಡುತ್ತಾರೆ ಅಂದರೆ ಅದಕ್ಕೆ ಕಾರಣ ಸಿದ್ದರಾಮಯ್ಯ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡಲು ನಗರ ಪಾಲಿಕೆ ಮುಂದಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ವಿಚಾರಗಿ ನಗರದಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ ಅವರು, ಸಿದ್ದರಾಮಯ್ಯ ಹೆಸರು ರಸ್ತೆಗೆ ಇಟ್ಟರೆ ತಪ್ಪೇನು ಎಂದ ಅವರು, ಬಡವರು, ಜನ ಸಾಮಾನ್ಯರಿಗೆ ಸಾಕಷ್ಟು ಯೋಜನೆ ಕೊಟ್ಟಿದ್ದಾರೆ.
ಬಡವರ ನೆಮ್ಮದಿ ಎರಡು ಹೊತ್ತು ಊಟ ಮಾಡುತ್ತಾರೆ ಅಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ. ಬಿಜೆಪಿಯಿಂದ ಯಾರು ನೆಮ್ಮದಿಯಿಂದ ಇಲ್ಲ. ಬಿಜೆಪಿಯವರು ನೆಮ್ಮದಿ ಕೆಡಿಸುತ್ತಾರೆ. ಇವರು ಜಾತಿ, ಧರ್ಮಗಳ ನೆಮ್ಮದಿ ಕೆಡಿಸುತ್ತಾರೆ. ಹನ್ನೊಂದು ವರ್ಷದಲ್ಲಿ ಬಡವರಿಗೆ, ರೈತರಿಗೆ ಒಂದು ಯೋಜನೆ ಇಲ್ಲ. ಇವರಿಗೆ ನೆನಪಾಗೋದು ಹಿಂದೂ, ಮುಸ್ಲಿಂ , ಪಾಕಿಸ್ತಾನ, ನಮ್ಮಲ್ಲಿರುವ ಅಂಜನಾದ್ರಿ ಬೆಟ್ಟ ಎಂದರು.