ಬೆಳಗಾವಿ:- ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಮಾತಿದೆ. ಜನಾದೇಶದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮೊದಲು ಜಾರಿ ಮಾಡಿದ್ದು ಶಕ್ತಿ ಯೋಜನೆ.
ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಯೋಜನೆಯೇ ಇದು. ಆದರೆ ಈ ಶಕ್ತಿ ಯೋಜನೆ ಜಾರಿ ಆದಾಗಿನಿಂದಲೂ ಒಂದಿಲ್ಲದ ಒಂದು ಸಮಸ್ಯೆ ಉಂಟಾಗುತ್ತಲೇ ಇದೆ.
ಒಂದೆಡೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೇ ನೂಕು ನುಗ್ಗಲಾಟ, ಇನ್ನೊಂದೆಡೆ ಸಿಕ್ಕ ಬಸ್ ನಲ್ಲೂ ಜನವೋ ಜನ. ಈ ಮಧ್ಯೆ ಸೀಟಿಗಾಗಿ ಕಿತ್ತಾಡುವ ಪ್ರಯಾಣಿಕರು.
ಎಸ್, ಅಂತದ್ದೇ ಘಟನೆ ಇದೀಗ ಬೆಳಗಾವಿಯ ಹುಕ್ಕೇರಿಯಲ್ಲಿ ನಡೆದಿದ್ದು, ಸೀಟಿಗಾಗಿ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿರೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಬ್ಬರ ಜುಟ್ಟು ಮತ್ತೊಬ್ಬರು ಹಿಡಿದು ಬಸ್ ನಿಂದಲೇ ದರದರನೇ ಎಳೆದು ನಿಲ್ದಾಣದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಮುಸ್ಲಿಂ ಹಾಗೂ ಹಿಂದೂ ಮಹಿಳೆ ನಡುವೆ ಗಲಾಟೆ ನಡೆದಿದೆ ಎಂಬುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಇನ್ನೂ ಮಹಿಳೆಯರ ಕಿತ್ತಾಟದ ವಿಡಿಯೋ ನೋಡಿದ ನೆಟ್ಟಿಗರು ಸರ್ಕಾರದ ಶಕ್ತಿ,, ನಮಗೆಲ್ಲಾ ಪಚೀತಿ ಎಂದು ತರಾವರಿ ಕಾಮೆಂಟ್ ಮಾಡುತ್ತಿದ್ದಾರೆ.