ಬ್ರಹ್ಮಚರ್ಯ ಆಚರಣೆ ಅತ್ಯಂತ ಕಠಿಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜೀವನದಲ್ಲಿ ಅತ್ಯಂತ ಕಠಿಣವಾದುದು ಬ್ರಹ್ಮಚರ್ಯ ಆಚರಣೆ ಹಾಗೂ ಸನ್ಯಾಸತ್ವ ಸ್ವೀಕರಿಸುವುದು. ಸ್ವಾಮಿ ವಿವೇಕಾನಂದರ ತತ್ವಸಿದ್ಧಾಂತಗಳಿಂದ ಪ್ರಭಾವಕ್ಕೆ ಒಳಗಾಗಿ ಸನ್ಯಾಸತ್ವ ಪಡೆದಿರುವ ಶಿವಪ್ರಿಯಾನಂದ ಸ್ವಾಮೀಜಿ ಅವರು ಇನ್ನು ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಜೀವನವಾಗಿರುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶಿವಪ್ರಿಯಾನಂದ ಸ್ವಾಮೀಜಿ (ಪುನೀತ ಮಹಾರಾಜ) ಸನ್ಯಾಸ ಸ್ವೀಕರಿಸಿದ ನಂತರ ಮಂಗಳವಾರ ಹಮ್ಮಿಕೊಂಡಿದ್ದ ಪುರಪ್ರವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿವಾನಂದ ಬೃಹನ್ಮಠದ ಅಭಿನವ ಶಿವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಹಿಂದಿನ ಜನ್ಮದ ಪುಣ್ಯದ ಫಲದಿಂದ ವೈರಾಗ್ಯ ಜೀವನ ಬರುತ್ತದೆ. ಸತ್ಸಂಗ, ಮಹಾತ್ಮರ ಸಹವಾಸದಲ್ಲಿ ತೊಡಗಿದಾಗ ವೈರಾಗ್ಯ, ಸದ್ಗುಣ, ಸಂಪನ್ನ, ವಿನಯಶೀಲತೆಯಂತಹ ಗುಣಗಳು ಪ್ರಸನ್ನವಾಗುತ್ತವೆ. ನಿರ್ಭಯಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶಿವಪ್ರಿಯಾನಂದ ಸ್ವಾಮೀಜಿ ಅವರು ಸಮಾಜವನ್ನು ಉದ್ಧರಿಸುವ ಮೂಲಕ ಜನರಿಗೆ ಉತ್ತಮ ಸಂದೇಶಗಳನ್ನು ನೀಡಲಿ ಎಂದು ಹಾರೈಸಿದರು.

ರಾಣೆಬೆನ್ನೂರಿನ ಪ್ರಕಾಶಾನಂದ ಸ್ವಾಮೀಜಿ ಮಾತನಾಡಿ, ಸನ್ಯಾಸ ಎನ್ನುವುದು ಆದರ್ಶ. ಇಂದಿನ ಕಾಲಘಟ್ಟದಲ್ಲಿ ಇಂದಿನ ಸನ್ಯಾಸಿಗಳಿಗೂ ಆದರ್ಶಗಳನ್ನು ಅಗಾಗ ನೆನಪಿಸಿಕೊಡುವುದು ಅನಿವಾರ್ಯವಾಗಿದೆ. ದೇಶ ಉದ್ಧಾರವಾಗಲು ತ್ಯಾಗ ಮತ್ತು ಸೇವೆ ಎಂಬ ಆದರ್ಶಗಳನ್ನು ಇಟ್ಟುಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ಅವರ ಆದರ್ಶಗಳನ್ನೇ ಪರಿಪಾಲಿಸಿಕೊಂಡು ಬಂದಿರುವ, ಸನ್ಯಾಸತ್ವ ಸ್ವೀಕರಿಸಿರುವ ಶಿವಪ್ರಿಯಾನಂದ ಸ್ವಾಮೀಜಿ ಅವರು ದೇಶದ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಶಿವಪ್ರಿಯಾನಂದ ಸ್ವಾಮೀಜಿ ಅವರು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ತತ್ವಾದರ್ಶಗಳನ್ನು ಅಳವಡಿಸಿಕೊಂಡು, ಬದ್ಧತೆ ಹೊಂದಿ, ತಮ್ಮ ಬ್ರಹ್ಮಚರ್ಯ ಜೀವನದಲ್ಲಿ ಹಲವು ಪ್ರಯೋಗಗಳನ್ನು ಮಾಡಿ, ಸನ್ಯಾಸತ್ವ ಸ್ವೀಕರಿಸಿ ಆಗಮಿಸಿದ್ದಾರೆ ಎಂದು ಹೇಳಿದರು.

ಗದಗ-ವಿಜಯಪುರ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಮಂತ್ರ-ಜಪ, ರಾಮಕೃಷಾಶ್ರಮದ ಹಿರಿಯ ಸನ್ಯಾಸಿಗಳ ಮಾರ್ಗದರ್ಶನ, ಸೇವಾಕಾರ್ಯ, ಸ್ವಾಮಿ ವಿವೇಕಾನಂದರ ಪುಸ್ತಕಗಳ ನಿರಂತರ ಅಧ್ಯಯನ, ಸಾಧು ಸೇವೆ-ಸಾಧು ಸಂಘದಲ್ಲಿ ನಿರತರಾಗಿದ್ದ ಪುನೀತ ಮಹಾರಾಜ ಈಗ ಹರಿದ್ವಾರದಲ್ಲಿ ಸನ್ಯಾಸ ದೀಕ್ಷೆ ಪಡೆದು ಶಿವಪ್ರಿಯಾನಂದ ಸ್ವಾಮೀಜಿಯಾಗಿ, ಹಿಮಾಲಯದಲ್ಲಿ ಸಾಧು-ಸಂತರ ಆಶೀರ್ವಾದ ಪಡೆದು ಗದಗ ನಗರಕ್ಕೆ ಪುರ ಪ್ರವೇಶ ಮಾಡಿದ್ದಾರೆ ಎಂದು ಹೇಳಿದರು.

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಬಿ.ಆರ್. ಯಾವಗಲ್ ಅಧ್ಯಕ್ಷತೆ ವಹಿಸಿದ್ದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಪ್ರಭಣ್ಣ ಹುಣಸಿಕಟ್ಟಿ, ವಾಸಣ್ಣ ಕುರಡಗಿ, ಸಿದ್ಧಲಿಂಗೇಶ್ವರ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಹನಮಂತಪ್ಪ ಪೂಜಾರ, ಶಕುಂತಲಾ ಮೂಲಿಮನಿ, ಗದಗ-ಬೆಟಗೇರಿ ನಗರಸಭೆ ಚುನಾಯಿತ ಅಧ್ಯಕ್ಷ ಕೃಷ್ಣ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ, ಮುಖಂಡರಾದ ಫಕ್ಕೀರಪ್ಪ ಹೆಬಸೂರ, ರಾಮಣ್ಣ ಫಲದೊಡ್ಡಿ, ಹನುಮಂತಪ್ಪ ಗರಗ, ಅಪ್ಪಣ್ಣ ಇನಾಮತಿ, ವಿವೇಕ ಯಾವಗಲ್, ಚನಪ್ಪ ಜಗ್ಗಲಿ ಸೇರಿ ಜಿಲ್ಲೆಯ ಪ್ರಮುಖರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾಧರ ದೊಡ್ಡಮನಿ, ಬಿ.ಆರ್. ದೇವರಡ್ಡಿ, ಶರಣಪ್ಪಗೌಡ ಪಾಟೀಲ, ರಾಜೇಂದ್ರ ಗೊಡಬೋಲೆ, ರುದ್ರಮ್ಮ ಕೆರಕಲಮಟ್ಟಿ, ಶ್ರೀನಿವಾಸ ಹುಯಿಲಗೋಳ, ಶಿವಲೀಲಾ ಅಕ್ಕಿ, ಜಿ.ವಿ. ಬಳಗಾನೂರ, ಪ್ರಭು ಬುರಬುರೆ, ಶಿವಣ್ಣ ನೀಲಗುಂದ, ಚನ್ನಪ್ಪ ಜಗಲಿ, ಬಸವರಾಜ ಸುಂಕಾಪೂರ, ನೀಲಮ್ಮ ಬೋಳನವರ, ಕೃಷ್ಣಗೌಡ ಪಾಟೀಲ, ಎಸ್.ವೈ. ಚಿಕ್ಕಟ್ಟಿ, ರವಿ ಮೂಲಿಮನಿ, ಷಣ್ಮುಖಪ್ಪ ಬಡ್ನಿ, ಆರ್.ಎನ್. ದೇಶಪಾಂಡೆ, ಮಲ್ಲಪ್ಪ ಕಲಗುಡಿ, ಸಿ.ಬಿ. ದೊಡ್ಡಗೌಡರ, ಸಿ.ಬಿ. ಕರಿಕಟ್ಟಿ, ಎನ್.ಎಸ್. ಹಿರೇಮನಿಪಾಟೀಲ, ಶಿವಾನಂದ ಮಾದಣ್ಣವರ, ಶಿವಪ್ಪ ಸಿಂಗಟಾಲಕೇರಿ, ರಾಮಚಂದ್ರ ಕುಲಕರ್ಣಿ, ಶಿವಕುಮಾರ ಶಿವನಗುತ್ತಿ ಇದ್ದರು. ಜೆ.ಕೆ. ಜಮಾದಾರ ನಿರ್ವಹಿಸಿದರು.

ಗದಗ ಸತ್ವಯುತ ಭೂಮಿಯಾಗಿದ್ದು, ಸಾಕಷ್ಟು ಸಂತರನ್ನು, ಶ್ರೇಷ್ಠರನ್ನು ಮಹಾತ್ಮರನ್ನು ಆಕರ್ಷಿಸಿದೆ. ಪಂಡಿತ ಪಂಚಾಕ್ಷರ, ಪಂಡಿತ ಪುಟ್ಟರಾಜ ಗವಾಯಿಗಳು ಈ ಭಾಗಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿದ್ದಾರೆ. ಅದೇ ರೀತಿ, ಹೊಸಳ್ಳಿ ಬೂದೀಶ್ವರ ಸ್ವಾಮೀಜಿ, ಶೇಷಾವಧೂತರು, ಚಿದಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಸೇರಿ ಅನೇಕ ಸ್ವಾಮೀಜಿಗಳು ಸತ್ವಯುತ ಭೂಮಿಯ ಶ್ರೇಷ್ಠತೆಯನ್ನು ಮೆರೆದಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here