ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ನಿಡಗುಂದಿ ಗ್ರಾಮದ ಸಂತೆ ಬಜಾರಿನ ಶ್ರೀ ಮಾರುತಿ ದೇವಸ್ಥಾನದಲ್ಲಿ ಮೇ 18ರಂದು ನಡೆಯಲಿರುವ 11 ಗಂಟೆಗಳ ಸಾಮೂಹಿಕ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮದ ನಿಮಿತ್ತ ಶ್ರೀ ಮಾರುತಿ, ಬ್ರಹ್ಮಚೈತನ್ಯ ಮಹಾರಾಜರ ಪಾದುಕೆ, ಹೆಬ್ಬಳ್ಳಿಯ ಚೈತನ್ಯಾಶ್ರಮದ ಪ.ಪೂ ದತ್ತಾವಧೂತ ಮಹಾರಾಜರ ಭವ್ಯ ಶೋಭಾಯಾತ್ರೆಯು ನೂರಾರು ಸದ್ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
ಗ್ರಾಮದ ಭೀಮಾಂಬಿಕಾ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂತೆ ಬಜಾರಿನ ಮಾರುತಿ ದೇವಸ್ಥಾನಕ್ಕೆ ತಲುಪಿತು. ಶೋಭಾಯಾತ್ರೆಯಲ್ಲಿ ಡೊಳ್ಳು, ಭಜನೆಯೊಂದಿಗೆ ಧೂಳಿ ಪಾದ ಪೂಜೆ, ಮಾರುತಿಗೆ ಆರುತಿ ಜರುಗಿತು.
ಶೋಭಾಯಾತ್ರೆಗೆ ದತ್ತಾತ್ರೇಯ ಹಾಗೂ ಲತಾ ಕುಲಕರ್ಣಿ ದಂಪತಿಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ ರಂಗರಾವ್ ಕುಲಕರ್ಣಿ, ಡಾ. ವಿ.ಎಂ. ದೇಶಪಾಂಡೆ, ಎ.ಜಿ. ಕುಲಕರ್ಣಿ, ರವಿ ರಾಮದಾಸಿ, ಕುಮಾರಸ್ವಾಮಿ ಅವಧಾನಿ, ಆನಂದ ಕುಲಕರ್ಣಿ, ಭರತ ಕುಲಕರ್ಣಿ, ಭಗತ್ ಕುಲಕರ್ಣಿ, ಸಂತೋಷ ರಾಮದಾಸಿ, ವಿನಾಯಕ ಜೋಶಿ, ರವಿ ಈಚಲಕರಂಜಿ, ಜಗದೀಶ ಕರಡಿ, ಎ.ಎ. ಕುಲಕರ್ಣಿ, ಶ್ರೀಧರ ಕುಲಕರ್ಣಿ, ಕೃಷ್ಣಾ ಕೊಪ್ಪಳ, ದಿಲೀಪ ಆರ್ ಸೇರಿದಂತೆ ನರೇಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು, ಹೆಬ್ಬಳ್ಳಿ ಚೈತನ್ಯಾಶ್ರಮದವರು ಇದ್ದರು.


